ಹಮಾಸ್‌ ಉಗ್ರರನ್ನು ಆಧುನಿಕ ರಾವಣರು ಎಂದ ಕಂಗನಾ

ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ನಾ‌ ಗಿಲೋನ್ ಅವರನ್ನು ಭೇಟಿಯಾಗಿದ್ದಾರೆ. ಇಸ್ರೇಲ್ ಖಂಡಿತವಾಗಿಯೂ ಯುದ್ಧದಲ್ಲಿ ಜಯ ಸಾಧಿಸಲಿದೆ, ಭಯೋತ್ಪಾದಕತೆಯ ವಿರುದ್ಧ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಂಗನಾ ತಾವು ಇಸ್ರೇಲ್‌ ರಾಯಭಾರಿ ಅವರೊಂದಿಗೆ ನಡೆಸಿದ ಮಾತುಕತೆ ವಿವರವನ್ನು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿಯನ್ನು ಭೇಟಿಯಾಗಿ ಮಾತು ಕತೆ ನಡೆಸಿದೆ. ಇಡೀ ಜಗತ್ತು ವಿಶೇಷವಾಗಿ ಇಸ್ರೇಲ್‌ ಭಯೋತ್ಪಾದಕತೆ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.

ನಿನ್ನೆ ನಾನು ರಾವಣ ಪ್ರತಿಕೃತಿ ದಹನದಲ್ಲಿ ಭಾಗಿಯಾಗಿದ್ದೇ ಇಂದು ಆಧುನಿಕ ಕಾಲದ ರಾವಣನನ್ನು ಮತ್ತು ಹಮಾಸ್‌ ಉಗ್ರರನ್ನು ಸದೆಬಡಿಯುತ್ತಿರುವ ಜನರನ್ನು ಭೇಟಿಯಾದೆ ಎಂದು ಹೇಳಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *