ಬೆಂಗಳೂರು: ಜಗತ್ತಿನ ಚಿತ್ರ ರಸಿಕರನ್ನು ತನ್ನೆಡೆಗೆ ನೋಡುವಂತೆ ಮಾಡಿದ ನಟ ರಾಕಿಂಗ್ ಸ್ಟಾರ್ ಯಶ್ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್, ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿಯನ್ನು ನಟ ಯಶ್ ಲಂಡನ್ನಲ್ಲಿ ಭೇಟಿ ಆಗಿದ್ದಾರೆ.
ಇಬ್ಬರೂ ಒಟ್ಟಿಗೆ ಫೋಟೊಕ್ಕೆ ಫೋಸು ನೀಡಿದ್ದು, ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭೇಟಿಯ ಚಿತ್ರವನ್ನು ಪೆರಿ ತಮ್ಮ ಇನ್ ಸ್ಟಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ‘ಯಶ್ ಅವರ 19’ ನೇ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿದೆ ಎನ್ನಲಾಗುತ್ತಿದೆ. ಸದ್ಯ ಯಶ್ ಲುಕ್ ಟೆಸ್ಟ್ ನಡೆಯುತ್ತಿದೆ ಎಂದು ತಮಿಳಿನ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯ ಬಾಲನ್ ಈ ಫೋಟೊ ಜೊತೆಗೆ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇದೇ ಅಕ್ಟೋಬರ್ ತಿಂಗಳಲ್ಲಿ ಬಿಗ್ ಸಿನಿಮಾವನ್ನು ಅನೌನ್ಸ್ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಜೆಜೆ ಪೆರ್ರಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಯಾರು ಈ ಪೆರ್ರಿ: ಜೆಜೆ ಪೆರ್ರಿ ಹಾಲಿವುಡ್ನ ಮೆಗಾ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ‘ಅವತಾರ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ಎರ್ಗೋ’, ‘ಸ್ಕೈಕ್ರೀಪರ್’, ‘ಎಕ್ಸ್ಎಕ್ಸ್ಎಕ್ಸ್’, ‘ಜಾನ್ ವಿಕ್’, ‘ಜಾಂಗೋ ಅನ್ಚೇನ್ಡ್’, ‘ಸ್ಪೈ’, ‘ದಿ ಎಕ್ಸ್ಪ್ಯಾಂಡೆಬಲ್ಸ್ 3’ ಅಂತಹ ಹಾಲಿವುಡ್ ಆಕ್ಷನ್ ಸಿನಿಮಾಗಳಿಗೆ ಜೆಜೆ ಪೆರ್ರಿ ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇವರ ಭೇಟಿ ಯಶ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಭರ್ಜರಿ ಸ್ಟಂಟ್ಗೆ ರೆಡಿಯಾಗುತ್ತಿದ್ದಾರೆ ಎಂದು ಊಹಿಸಲಾಗಿದೆ.
Latest pic of Yash with Hollywood director JJPerry at London. #Yash is currently undergoing look tests for #Yash19.
The #KGF star is fresh from the success of monstrous #KGFChapter2 and will be announcing his upcoming biggie Yash 19 in the October month.
The film is likely to… pic.twitter.com/25jCRlgnG7
— Manobala Vijayabalan (@ManobalaV) September 26, 2023