ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್: ಹೆಸರು ರಿವೀಲ್‌

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​​ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದಾರೆ. ಸೆಪ್ಟೆಂಬರ್​ 23ರಂದು ಪುಟಾಣಿ ಕಂದನನ್ನ ಪ್ರಪಂಚಕ್ಕೆ ಪರಿಚಯಿಸಿದ್ದಾರೆ.

ಸ್ವರಾ ಭಾಸ್ಕರ್ ಮಗುವಿನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ನಮ್ಮ ಪ್ರಾರ್ಥನೆಗಳು ಕೇಳಿಬಂದಿದ್ದು, ನಮ್ಮ ಮಗಳು 23 ಸೆಪ್ಟೆಂಬರ್​ 2023ರಂದು ಜನಿಸಿದ್ದಾಳೆ.

ನಮ್ಮಿಬ್ಬರಿಗೂ ಹೊಸ ಪ್ರಪಂಚ’ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಂದ ಹಾಗೇ ಸ್ವರಾ ಮತ್ತು ಪತಿ ತಮ್ಮ ಮುದ್ದಾದ ಮಗಳಿಗೆ ರಾಬಿಯಾ ಎಂದು ಹೆಸರಿಟ್ಟಿರುವುದನ್ನು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *