ಹುಬ್ಬಳ್ಳಿ: ನೇಹಾ ಹಿರೇಮಠ್ ಬರ್ಬರ ಹತ್ಯೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಕುತ್ತಿಗೆಗೆ ಚುಚ್ಚಿ ಕೊಂದ ಫಯಾಜ್‌ಗೆ ಗಲ್ಲು ಶಿಕ್ಷೆಯಾಗಲಿ ಅನ್ನೋ ಕೂಗು ಜೋರಾಗಿದೆ. ಇಂತಹ ಸಂದರ್ಭದಲ್ಲೇ ಕೆಲವು ಕಿಡಿಗೇಡಿಗಳು ನೇಹಾ ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಒಂದು ಕಡೆ ಜಸ್ಟೀಸ್ ಫರ್ ನೇಹಾ ಅಭಿಯಾನ ನಡೆಯುತ್ತಿದೆ. ಮತ್ತೊಂದೆಡೆ ನೇಹಾ, ಫಯಾಜ್ ಹೆಸರಲ್ಲಿ ದಿಢೀರ್ ಅಂತ ಸೋಷಿಯಲ್ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಫೋಟೋಗಳನ್ನ ವೈರಲ್ ಮಾಡಲಾಗುತ್ತಿದೆ. ಕೊಲೆಯನ್ನೇ ಸಮರ್ಥಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ಆರೋಪ ಕೇಳಿ ಬಂದಿದೆ.
ಇನ್ಸ್ಟಾಗ್ರಾಮ್ನಲ್ಲಿ ಹೊಸದಾಗಿ ಅಕೌಂಟ್ ಕ್ರಿಯೇಟ್ ಮಾಡಿರುವ ಕೆಲವರು ನೇಹಾ ಫಯಾಜ್ ಟ್ರೂ ಲವ್, ಜಸ್ಟೀಸ್ ಫಾರ್ ಲವ್ ಅಂತ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಗಳಿಂದ ಫೋಟೋ ಶೇರ್ ಮಾಡಿ ವೈರಲ್ ಆಗಿದೆ. ಈ ಫೋಟೋ ವೈರಲ್ ಆಗಿದ್ದಕ್ಕೆ ನೇಹಾ ತಂದೆ ಆಕ್ರೋಶ ಹೊರ ಹಾಕಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.
ಹೀಗೆ ಹಲವು ರೀತಿಯ ಫೋಟೋ ಮತ್ತು ವಿಡಿಯೋ ವೈರಲ್ ಮಾಡಲು ಇನ್ಸ್ಟಾಗ್ರಾಮ್ನ ಕೆಲವು ಕಿಡಿಗೇಡಿಗಳು ಬಳಸಿಕೊಂಡಿದ್ದಾರೆ.ವಫೋಟೋ ವೈರಲ್ ಆದ ಬಳಿಕ ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಹಿಂದೂ ಕಾರ್ಯಕರ್ತರು ಇಬ್ಬರು ಆರೋಪಿಗಳನ್ನ ಹಿಡಿದು ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.