ಮೈಸೂರು: ಮೈಸೂರು ವಿಶ್ವವಿದ್ಯಾನಿಲದ ಸಾವಯವ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ಡಾ. ಟಿ.ಆರ್.ಸ್ವರೂಪ್ ಅವರು ಅಂತರಾಷ್ಟ್ರೀಯ ವಿಶ್ವ ರಸಾಯನಶಾಸ್ತ್ರ ವೇದಿಕೆಯು ವಿಶೇಷ ಉಪನ್ಯಾಸ ನೀಡಲು ಫೆಬ್ರವರಿ 1 ರಿಂದ 03 ರವರೆಗೆ ಜಪಾನಿನ ಒಸಾಕದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ಆಹ್ವಾನವನ್ನು ಪಡೆದಿದ್ದಾರೆ.
ಸಮ್ಮೇಳನದಲ್ಲಿ ಹಸಿರು ಸಿಂಥೆಟಿಕ್ ರೂಪಾಂತರ ಸಂಶೋಧನೆಗೆ ಸಂಬoಧಿಸಿದoತೆ ಉಪನ್ಯಾಸ ನೀಡಲಿದ್ದಾರೆ. ಅಯಾನಿಕ್ ದ್ರವ, ಘನ ಹಂತದ ಪ್ರತಿಕ್ರಿಯೆ ಮತ್ತು ಎಲೆಕ್ಟ್ರೋ ಸಾವಯವ ಪ್ರತಿಕ್ರಿಯೆಗಳ ಮೇಲೆ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಅತ್ಯುನ್ನತ ಲೇಖನಗಳನ್ನು ಪ್ರಕಟಿಸಿದ್ದು, ಇವುಗಳ ಮೇಲೆ ಡಾ. ಟಿ. ಆರ್. ಸ್ವರೂಪ್ ರವರು ಉಪನ್ಯಾಸ ನೀಡಲಿದ್ದಾರೆ.