ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವೈತ ಕೃಷ್ಣ ಬಿ ಹಾಗೂ ಜಿ ಜ್ವಲನ್ ಜೋಶಿ ಇವರು ಪುತ್ತೂರಿನ ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರದಲ್ಲಿ ಆಯೋಜಿಸಲಾದ ಚರ್ಚಾಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿ ಯುವ ವತಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜೀವನದ ಬೆಳವಣಿಗೆಗೆ ಶಿಕ್ಷಣದಲ್ಲಿ ಕನ್ನಡ ಬೇಕೇ? ಬೇಡವೇ? ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ನವೆಂಬರ್ ೧೧ರಂದು ಆಯೋಜಿಸಲಾಗಿತ್ತು.

ಅದ್ವೈತ ಕೃಷ್ಣ ಬಿ ಅವರು ಪುತ್ತೂರಿನ ಮೂಡೋಡಿ ಆರ್ಯಾಪು ನಿವಾಸಿ ತೆರಿಗೆ ಸಲಹೆಗಾರ ಅನಂತನಾರಾಯಣ ಬಿ ಹಾಗೂ ಉಪನ್ಯಾಸಕಿ ಶಂಕರಿ ಬಿ ಇವರ ಪುತ್ರ. ಜಿ.ಜ್ವಲನ್ ಜೋಶಿ ಅವರು ಪುತ್ತೂರು ಪಡ್ನೂರಿನ ದಿ. ಜಿ ಪ್ರವೀಣ ಜೋಶಿ ಮತ್ತು ಮೆಸ್ಕಾಂ ಉದ್ಯೋಗಿ ಶಿಲ್ಪಾದೇವಿ ಪಿ ಆರ್ ಅವರ ಪುತ್ರ.

Font Awesome Icons

Leave a Reply

Your email address will not be published. Required fields are marked *