ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಬಿ.ಎನ್.ಮೂರ್ತಿರವರಿಗೆ ನುಡಿ ನಮನ

ಪುತ್ತೂರು : ಸಮಾಜದ ಏಳಿಗೆಗಾಗಿ ನಿಸ್ವಾರ್ಥ ಸೇವೆಗೈದ ಬಿ.ಎನ್.,ಮೂರ್ತಿ ಅವರ ಕೆಲಸ ಕಾರ್ಯಗಳು ಶ್ಲಾಘನೀಯ. ಅವರು 2010ರಲ್ಲಿ ಪುತ್ತೂರಿನಲ್ಲಿ ಅಂಬಿಕಾ ಪದವಿ ಪೂರ್ವ ಕಾಲೇಜು ಆರಂಭಿಸುವ ಸಂದರ್ಭದಲ್ಲಿ ಎದುರಾದ ಅಡ್ಡಿ ಆತಂಕಗಳನ್ನು ನಿವಾರಿಸುವಲ್ಲಿ ಬೆನ್ನೆಲುಬಾಗಿ ನಿಂತು ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಪರಿಶ್ರಮಿಸಿದವರು. ಹಿರಿಯ ಚೇತನರಾದ ಬಿ.ಎನ್. ಮೂರ್ತಿ ಅವರು ಅಗಲಿರುವುದ ದುಃಖಕರವಾದ ವಿಷಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತದ ಕಾರ್ಯದರ್ಶಿಗಳಾಗಿ ಹತ್ತು ವರ್ಷಕ್ಕೂ ಮೀರಿ ಕಾರ್ಯ ನಿರ್ವಹಿಸಿದ ಬಿ.ಎನ್.ಮೂರ್ತಿ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ನಡೆದ ನುಡಿ ನಮನ – ಸಂತಾಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದರು.

ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಅವರು ಅಂಬಿಕಾ ಪದವಿ ಪೂರ್ವ ಕಾಲೇಜಿನ ಸ್ಥಾಪನೆಗೆ ಕಾರಣೀಭೂತರಾಗಿ ಸಂಸ್ಥೆಯನ್ನು ಮುನ್ನಡೆಸಿದ ಬಿ.ಎನ್.ಮೂರ್ತಿರವರ ಸಾಧನೆಯ ಹಾದಿಯ ಬಗ್ಗೆ ತಿಳಿಯಪಡಿಸಿದರು. ಶಾಲಾ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಶಿಕ್ಷಕರಿಂದ ಸಾಮೂಹಿಕ ಮೌನ ಪ್ರಾರ್ಥನೆ ನೆರವೇರಿತು.

Font Awesome Icons

Leave a Reply

Your email address will not be published. Required fields are marked *