ಅಟಲ್ ಸೇತುವಿನಲ್ಲಿ ಮೊದಲ ಅಪಘಾತ: ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಮುಂಬೈ: ದೇಶದ ಅತೀ ಉದ್ದದ ಸೀ ಬ್ರಿಡ್ಜ್ ಅಟಲ್ ಸೇತು ಉದ್ಘಾಟನೆಯಾಗಿ ತಿಂಗಳಾಗುವ ಮೊದಲೇ ಅಪಘಾತ ಸಂಭವಿಸಿದೆ. ಸೀ ಬ್ರಿಡ್ಜ್‌ನಲ್ಲಿ ಸಾಗುತ್ತಿದ್ದ ಕಾರೊಂದು ಬ್ರಿಡ್ಜ್‌ ಬದಿ ತಡೆಗೋಡೆಯಂತೆ ಹಾಕಿದ್ದ ಕಬ್ಬಿಣದ ಸರಳುಗಳಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಈ ಅಟಲ್ ಸೇತು ಸೀ ಬ್ರಿಡ್ಜ್‌, ದಕ್ಷಿಣ ಮುಂಬೈಯನ್ನು ಉಪಗ್ರಹ ನಗರಿ ನವೀ ಮುಂಬೈಗೆ ಸಂಪರ್ಕಿಸುತ್ತದೆ.

ಈ ಹೊಸ ಸೀ ಬ್ರಿಡ್ಜ್‌ನಲ್ಲಿ ವೇಗವಾಗಿ ಬಂದ ಕಾರೊಂದು ಬ್ರಿಡ್ಜ್‌ ಬದಿಯಲ್ಲಿರುವ ಕಬ್ಬಿಣದ ರೇಲಿಂಗ್‌ಗೆ ಡಿಕ್ಕಿ ಹೊಡೆದು ನಿಲ್ಲುವ ಮೊದಲು ಹಲವು ಪಲ್ಟಿ ಹೊಡೆದಿದ್ದು, ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಇದೇ ಕಾರಿನ ಹಿಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಈ ಕಾರು ಮಹಾರಾಷ್ಟ್ರದ ರಾಯ್‌ಗಡ ಜಿಲ್ಲೆಯ ಉರ್ನಾ ತಾಲೂಕಿನ ಚಿರ್ಲೆ ಗ್ರಾಮಕ್ಕೆ ತೆರಳುತ್ತಿತ್ತು. ಅಪಘಾತದ ಸಮಯದಲ್ಲಿ ಕಾರಿನಲ್ಲಿ ಮಹಿಳೆ ಹಾಗೂ ಸಣ್ಣ ಮಕ್ಕಳು ಕೂಡ ಇದ್ದರು ಎಂದು ತಿಳಿದು ಬಂದಿದೆ.

ಅಟಲ್ ಬಿಹಾರಿ ವಾಜಪೇಯಿ ಸೆವ್ರಿ ನವ ಶೇವಾ ಅಟಲ್ ಸೇತು ಎಂದು ಈ ನೂತನ ಸೇತುವೆಯ ಹೆಸರಿದ್ದು ಜನವರಿ 12 ರಂದು ಪ್ರಧಾನಿ ಈ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದರು. ಇದು ರಾಯಗಢ ಹಾಗೂ ಮುಂಬೈ ನಡುವಿನ ಪ್ರಯಾಣದ ಅವಧಿಯನ್ನು ಕೂಡ ಕಡಿಮೆ ಮಾಡಲಿದೆ.

https://www.instagram.com/reel/C2XpDo6pZnn/?utm_source=ig_web_copy_link

Font Awesome Icons

Leave a Reply

Your email address will not be published. Required fields are marked *