ಮಾಲ್ಡೀವ್ಸ್: ಚೀನಾ ಪ್ರೇಮಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅಧಿಕಾರ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮಯಿಜ್ಜು ಸರ್ಕಾರ ಚೀನಾ ಪರ ನಿಲುವು ತಾಳಿದೆ. ಇತ್ತೀಚೆಗೆ ಚೀನಾದ ಗೂಢಾಚರ್ಯೆ ಹಡಗಿಗೆ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧ ಪಕ್ಷಗಳು ಖಂಡಿಸಿದೆ.
ಹೀಗಾಗಿ ಮಾಲ್ಡೀವ್ಸ್ ವಿರೋಧ ಪಕ್ಷಗಳು ಅಧ್ಯಕ್ಷ ಮೊಹಮ್ಮದ್ ಮಯಿಜ್ಜು ಅವರ ಮೇಲೆ ದೋಷಾರೋಪಣೆ ಹೊರಿಸಿವೆ. ಅವಿಶ್ವಾಸ ಗೊತ್ತುವಳಿಯಲ್ಲಿ ಮೊಹಮ್ಮದ್ ಮಯಿಜ್ಜು ಅವರು ಸೋತರೆ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಲಿದ್ದಾರೆ.
ಕಳೆದ 2 ದಿನದ ಹಿಂದಷ್ಟೇ ಮಾಲ್ಡೀವ್ಸ್ ಸಂಸತ್ ಭವನದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿತ್ತು. ಆಡಳಿತ ಪಕ್ಷದ ಸದಸ್ಯರ ಮೇಲೆ ವಿರೋಧ ಪಕ್ಷದ ನಾಯಕರು ಕೈ, ಕೈ ಮಿಲಾಯಿಸಿದ್ದರು.
ವಿರೋಧ ಪಕ್ಷದ ಅಶ್ವಾಸ ಗೊತ್ತುವಳಿಗೆ ಉತ್ತಮ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷ ಡೆಮೊಕ್ರೆಟಿಕ್ ಪಕ್ಷಕ್ಕೆ ಬಹುಮತಕ್ಕೆ ಬೇಕಾಗುವ ಸದಸ್ಯರು ಸಹಿ ಮಾಡಿದ್ದಾರೆ ಎನ್ನಲಾಗಿದೆ.