ಬೀದರ್: ತಾಲೂಕಿನ ಬಕ್ಕಚೌಡಿ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳ ಮೇಲೆ ತಾಲೂಕ್ ತಹಸೀಲ್ದಾರರಾದ ಡಿ.ಜೆ.ಮಹತ್ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ ಮತ್ತು ತಂಡದಿಂದ ದಿಢೀರ ದಾಳಿ ನಡೆಸಿದ್ದಾರೆ.
ಯಾವುದೇ ವೈದ್ಯಕೀಯ ಪದವಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದ 2 ನಕಲಿ ಕ್ಲಿನಿಕ್‌ಗಳ ಮೇಲೆ ದಿಢೀರ ದಾಳಿ ನಡೆಸಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಸೀಜ್ ಮಾಡಿರುವ ಔಷಧಿಗಳನ್ನು ಪರಿಶೀಲಿಸಲಾಗಿದ್ದು, ರೋಗಿಗಳಿಗೆ ಹೈಡೋಸ್ Antibiotics ಹಾಗೂ Steroids ನೀಡುತ್ತಿರುವುದು ಕಂಡುಬಂದಿರುತ್ತದೆ.
ನಕಲಿ ವೈದ್ಯರು ನೀಡುತ್ತಿರುವ ಚಿಕಿತ್ಸೆಯಿಂದಾಗಿ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸೇರಿದ ಗ್ರಾಮಸ್ಥರಿಗೆ ತಾಲೂಕಾ ಆರೋಗ್ಯ ಅಧಿಕಾರಿ ಡಾ| ಸಂಗಾರೆಡ್ಡಿ ಜಾಗೃತಿ ಮೂಡಿಸಿದರು.
ಈ ಸಂದಂರ್ಭದಲ್ಲಿ ಆಯುಷ ವೈದ್ಯಾಧಿಕಾರಿಗಳಾದ ಡಾ| ಶಿವಕುಮಾರ ನೇಳಗೆ ಕೆ.ಪಿ.ಎಂ.ಇ ವಿಷಯ ನಿರ್ವಾಹಕರು ಮಹೇಶ ರೆಡ್ಡಿ, ಪ್ರವೀಣ, ಹಾಗೂ ಪೋಲಿಸ್ ಸಿಬ್ಬಂದಿಗಳಾದ ಎ.ಎಸ್.ಐ ಸುಭಾಷ, ಆನೀಲ ಪಿ.ಸಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಯಾಸಿನ್, ನಂದಕುಮಾರ, ಶೆಷಾರಾವ್, ರಾಜಕುಮಾರ ಇನ್ನಿತರರು ಉಪಸ್ಥಿತರಿದ್ದರು.