ಅನಾರೋಗ್ಯದಿಂದ ಖ್ಯಾತ ಗಾಯಕ ‘ಪಂಕಜ್ ಉಧಾಸ್’ ನಿಧನ

ನವದೆಹಲಿ : 72 ವರ್ಷದ ಖ್ಯಾತ ಗಾಯಕ ಪಂಕಜ್ ಉಧಾಸ್ ನಿಧನರಾಗಿದ್ದಾರೆ. ಈ ಸುದ್ದಿಯನ್ನ ಅವರ ಕುಟುಂಬ ಹಂಚಿಕೊಂಡಿದೆ.

“ದೀರ್ಘಕಾಲದ ಅನಾರೋಗ್ಯದಿಂದಾಗಿ ಫೆಬ್ರವರಿ 26, 2024 ರಂದು ಪದ್ಮಶ್ರೀ ಪಂಕಜ್ ಉಧರ್ ಅವರ ದುಃಖದ ನಿಧನದ ಬಗ್ಗೆ ತಿಳಿಸಲು ತುಂಬಾ ಭಾರವಾದ ಹೃದಯದಿಂದ ನಾವು ದುಃಖಿತರಾಗಿದ್ದೇವೆ” ಎಂದು ಪಂಕಜ್ ಉಧಾಸ್ ಅವರ ಕುಟುಂಬಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಅನೇಕರಿಗೆ ಆಘಾತವನ್ನುಂಟು ಮಾಡಿದ್ದು, ಗಾಯಕ ಸೋನು ನಿಗಮ್ ಸಂತಾಪ ವ್ಯಕ್ತ ಪಡೆಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಾಯಕ ಸೋನು ನಿಗಮ್, “ನನ್ನ ಬಾಲ್ಯದ ಪ್ರಮುಖ ಭಾಗವೊಂದು ಇಂದು ಕಳೆದುಹೋಗಿದೆ. ಶ್ರೀಪಂಕಜ್ ಉಧಾಸ್ ಜೀ, ನಾನು ನಿಮ್ಮನ್ನು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇನೆ. ನೀವು ಇನ್ನಿಲ್ಲ ಎಂದು ತಿಳಿದು ನೊಂದಿದ್ದೇನೆ. ಓಂ ಶಾಂತಿ” ಎಂದಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *