ಅಪ್ರಾಪ್ತ ಮಗನಿಗೆ ಬೈಕ್ ಓಡಿಸಲು ಅವಕಾಶ,  ತಂದೆಗೆ  25,000 ರೂ. ದಂಡ..! » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

FILE PHOTO


 

A man in Chamarajanagar was fined Rs 25,000 by the local court for allowing his minor son to drive his two-wheeler on public roads. The court warned the man not to repeat the offence, failing which he would face a three-month jail term in case of default of payment of the fine

ಮೈಸೂರು, SEP.19,2024: (www.justkannada.in news) ಚಾಮರಾಜನಗರದಲ್ಲಿ ತನ್ನ ಅಪ್ರಾಪ್ತ ಮಗನಿಗೆ ಸಾರ್ವಜನಿಕ ರಸ್ತೆಗಳಲ್ಲಿ ತನ್ನ ದ್ವಿಚಕ್ರ ವಾಹನವನ್ನು ಓಡಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸ್ಥಳೀಯ ನ್ಯಾಯಾಲಯವು 25,000 ರೂ. ದಂಡ ವಿಧಿಸಿದೆ. ಜತೆಗೆ ಅಪರಾಧವನ್ನು ಪುನರಾವರ್ತಿಸದಂತೆ ನ್ಯಾಯಾಲಯವು ವ್ಯಕ್ತಿಗೆ ಎಚ್ಚರಿಕೆ ನೀಡಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಕವಿತಾ ಅವರು ಮಾಧ್ಯಮದ  ಜತೆ ಮಾತನಾಡಿ, 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕ ಪೊಲೀಸರು ಸಿಟಿ ರೌಂಡ್ಸ್ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ. ನಂತರ ದ್ವಿಚಕ್ರ ವಾಹನ ಹೊಂದಿರುವ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೋಷಕರ ಕಡೆಯಿಂದ ಇಂತಹ ಗಂಭೀರ ನಿರ್ಲಕ್ಷ್ಯವನ್ನು ಪೊಲೀಸರು ಸಹಿಸುವುದಿಲ್ಲ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಮೋಟಾರು ವಾಹನ ಕಾಯಿದೆಯು ಯಾವುದೇ ವ್ಯಕ್ತಿ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರದ ಹೊರತು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ವಾಹನವನ್ನು ಓಡಿಸುವಂತಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ವಾಹನವನ್ನು ಓಡಿಸಬಾರದು. ಅಪ್ರಾಪ್ತ ವಯಸ್ಕರನ್ನು ವಾಹನ ಓಡಿಸಲು ಪ್ರೋತ್ಸಾಹಿಸಿದರೆ ಅಂಥ ಉಲ್ಲಂಘನೆಗಳಿಗೆ ಮಾಲೀಕರು ಅಥವಾ ಪೋಷಕರು ಜವಾಬ್ದಾರರಾಗಿರುತ್ತಾರೆ ಎಂದರು.

ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಗೆ ಪ್ರೋತ್ಸಾಹ ನೀಡುವುದು ಕಾನೂನು ಬಾಹಿರ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹ. ಈ ಪ್ರಕರಣವು ಎಲ್ಲಾ ಪೋಷಕರ ಕಣ್ಣು ತೆರೆಸುವ ಕಾರ್ಯವಾಗಬೇಕು ಎಂದು ಹಿರಿಯ ವಕೀಲ ಎಚ್‌.ಎನ್. ವೆಂಕಟೇಶ್ ಒತ್ತಿ ಹೇಳಿದರು.

“ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರತಿಯೊಬ್ಬ ಪೋಷಕರು ತಿಳಿದಿರಬೇಕು. ಜತೆಗೆ ಕಾನೂನಿನ ಬಗ್ಗೆ ತಿಳಿದಿಲ್ಲ ಎಂದು ಅವರು ಮುಗ್ಧತೆಯನ್ನು ಸಮರ್ಥಿಸಲು ಸಾಧ್ಯವಿಲ್ಲ, ಏಕೆಂದರೆ ಕಾನೂನಿನ ಅಜ್ಞಾನವು ಕ್ಷಮಾರ್ಹವಲ್ಲ. 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಲೈಸೆನ್ಸ್‌ ಹೊಂದಿರುವವರು ಮಾತ್ರ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಓಡಿಸಲು ಅನುಮತಿಸಲಾಗಿದೆ ”ಎಂದು ವಿವರಿಸಿದರು.

key words: Minor son, allowed to, ride bike, father fined, Rs 25,000 Penalty.!

SUMMARY:

FILE PHOTO

A man in Chamarajanagar was fined Rs 25,000 by the local court for allowing his minor son to drive his two-wheeler on public roads. The court warned the man not to repeat the offence, failing which he would face a three-month jail term in case of default of payment of the fine.

Font Awesome Icons

Leave a Reply

Your email address will not be published. Required fields are marked *