ಅಫ್ಘಾನ್ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ವಿರಾಟ್ ಕೊಹ್ಲಿ ಗೈರು

ಇಂದು ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಆಡುವುದಿಲ್ಲ ಎಂದು ಹೆಡ್​ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ಟೀಂ ಇಂಡಿಯಾ ಆಫ್ಘಾನ್ ವಿರುದ್ಧ ಒಟ್ಟು 3 ಟಿ-20 ಪಂದ್ಯಗಳು ನಡೆಯಲಿವೆ. ಜನವರಿ 14 ಮತ್ತು 17 ರಂದು ನಡೆಯುವ ಎರಡನೇ ಹಾಗೂ ಮೂರನೇ ಪಂದ್ಯಗಳಿಗೆ ಕೊಹ್ಲಿ ಲಭ್ಯರಾಗಲಿದ್ದಾರೆ. ವೈಯಕ್ತಿಕ ಕಾರಣದಿಂದ ಕೊಹ್ಲಿ ಮೊದಲ ಪಂದ್ಯವನ್ನು ಆಡುತ್ತಿಲ್ಲ ಎಂದು ದ್ರಾವಿಡ್ ಇದೇ ವೇಳೆ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಬಹುದಿನಗಳ ನಂತರ ಟಿ-20 ಪಂದ್ಯಗಳಿಗೆ ವಾಪಸ್ ಆಗಿದ್ದಾರೆ. ನವೆಂಬರ್ 2022 ಇವರಿಬ್ಬರು ಆಡಿರುವ ಕೊನೆಯ ಟಿ-20 ಪಂದ್ಯವಾಗಿದೆ.

Font Awesome Icons

Leave a Reply

Your email address will not be published. Required fields are marked *