ಬೆಂಗಳೂರು: ಅಮಿತ್ ಶಾ ಅವರು ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ಚುನಾವಣೆ ಇದ್ದಾಗ ಬಂದೇ ಬರ್ತಾರೆ. ಪ್ರಧಾನಿಯದ್ದು ಇಷ್ಟರಲ್ಲೇ ಟಿಪಿ ಬರುತ್ತೆ. ಅವರು ಏನ್ ಮಾಡಬೇಕೋ ಮಾಡಲಿ, ನಾವೇನ್ ಮಾಡಬೇಕೋ ಮಾಡ್ತೀವಿ. ಸಂದರ್ಭ ಬಂದಾಗ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದರು.