ಅಮೆರಿಕದಲ್ಲಿ ದಿವಾಳಿ ಅರ್ಜಿ ಸಲ್ಲಿಸಿದ ಬೈಜುಸ್

ಡೆಲವೇರ್: ಬೈಜುಸ್​ನ ಅಮೆರಿಕದ ಘಟಕವೊಂದು ಡೆಲವೇರ್ ಕೋರ್ಟ್​ವೊಂದರಲ್ಲಿ ದಿವಾಳಿ ತಡೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. ಬೈಜುಸ್​ನ ಆಲ್ಫಾ ಯೂನಿಟ್ ಸಲ್ಲಿಸಿದ ಅರ್ಜಿ ಅದು ತನ್ನ ಆಸ್ತಿಯ ಮೊತ್ತ 500 ಮಿಲಿಯನ್​ನಿಂದ 1 ಬಿಲಿಯನ್ ಡಾಲರ್​ವರೆಗೂ ಇರಬಹುದು ಎಂದು ಲೆಕ್ಕ ಕೊಟ್ಟಿದೆ.

ಇನ್ನು, ತನಗಿರುವ ಸಾಲವು 1 ಬಿಲಿಯನ್​ನಿಂದ 10 ಬಿಲಿಯನ್​ವರೆಗೂ ಇದೆ ಎಂದು ಹೇಳಿದ್ದು, ಸಾಲ ಕೊಟ್ಟವರ ಸಂಖ್ಯೆ 100ರಿಂದ 199 ಎಂದು ಮಾಹಿತಿ ನೀಡಿರುವುದು ತಿಳಿದುಬಂದಿದೆ.

ಭಾರತ ಮೂಲದ ಬೈಜುಸ್ ಅತ್ಯಂತ ಯಶಸ್ವಿ ಸ್ಟಾರ್ಟಪ್​ಗಳಲ್ಲಿ ಒಂದೆನಿಸಿತ್ತು. ಕೇರಳ ಮೂಲದ ಬೈಜು ರವೀಂದ್ರನ್ ಬೆಂಗಳೂರಿನಲ್ಲಿ ಸ್ಥಾಪಿಸಿದ ಈ ಸ್ಟಾರ್ಟಪ್ 2022ರಲ್ಲಿ 22 ಬಿಲಿಯನ್ ಡಾಲರ್​ನಷ್ಟು ವ್ಯಾಲ್ಯುಯೇಶನ್ ಪಡೆದಿತ್ತು. ಈ ಉಚ್ಛ್ರಾಯ ಸ್ಥಿತಿಯಿಂದ ಬೈಜುಸ್ ಇದೀಗ ಗಣನೀಯವಾಗಿ ಕುಸಿದಿದೆ. ಅದರ ಕೆಲ ಹೂಡಿಕೆದಾರರು ಬೈಜುಸ್​ನ ಮೌಲ್ಯವನ್ನು 1 ಬಿಲಿಯನ್ ಡಾಲರ್​ಗೆ ಇಳಿಸಿದ್ದಾರೆ. ಬೈಜುಸ್ ವಿರುದ್ಧ 2022ರ ನಂತರ ಕೆಲ ಬ್ಯಾಂಕಪ್ಸಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಜೊತೆಗೆ ತೆರಿಗೆ ಇಲಾಖೆಗಳ ದಾಳಿ ಇತ್ಯಾದಿ ಘಟನೆಗಳಿಂದ ಬೈಜುಸ್ ವಿವಾದ ಮತ್ತು ಕಷ್ಟದ ಸುಳಿಗೆ ಸಿಲುಕುತ್ತಲೇ ಬಂದಿದೆ.

ಸಾಲಗಾರರ ವಿಪರೀತ ಒತ್ತಡಕ್ಕೆ ಒಳಗಾಗಿರುವ ಬೈಜುಸ್​ನ ಆಲ್ಫಾ ಘಟಕವು ಅಮೆರಿಕದ ಡೆಲವೇರ್ ರಾಜ್ಯದ ಕೋರ್ಟ್​ನಲ್ಲಿ ದಿವಾಳಿ ತಡೆಗೆ ಅರ್ಜಿ ಸಲ್ಲಿಸಿ ನೆರವು ಯಾಚಿಸಿದೆ. ಹೆಚ್ಚುವರಿ ಷೇರುಗಳ ವಿತರಣೆ ಮೂಲಕ 200 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಲಾಗುವುದು. ಈ ಹಣವನ್ನು ತುರ್ತು ಸಾಲಗಳಿಗೆ ಮತ್ತು ಸಂಸ್ಥೆಯ ಕಾರ್ಯನಿರ್ವಹಣೆಗೆ ಬಳಸಲಾಗುವುದು ಎಂದು ಬೈಜುಸ್ ತನ್ನ ಅರ್ಜಿಯಲ್ಲಿ ವಿವರಿಸಿದೆ.

 

Font Awesome Icons

Leave a Reply

Your email address will not be published. Required fields are marked *