ಅಮ್ಮತ್ತಿಯಲ್ಲಿ ಗಾಂಜ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಅಮ್ಮತ್ತಿ: ಅಮ್ಮತಿಯ ಮುತ್ತಪ್ಪ ದೇವಸ್ಥಾನದ ಕಡೆಗೆ ತೆರಳುವ ರಸ್ತೆಯಲ್ಲಿನ ಬಸ್ ನಿಲ್ದಾಣ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವು ದೊರೆತ ವಿರಾಜಪೇಟೆಯ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಕಳತ್ ಮಾಡ್ ಗ್ರಾಮದ ಕೊಟ್ಟಡ ಕಾಲೋನಿ ನಿವಾಸಿಯಾದ ಸಚಿನ್ ಪಿ.ಎಸ್( 32) ಎಂಬುವನ ಬಳಿಯಿಂದ 70 ಗ್ರಾಂ ಗಾಂಜಾ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ನಡೆಸಿ ಕ್ರಮ ಕೈಗೊಂಡಿದ್ದಾರೆ.

ವಿರಾಜಪೇಟೆ ಡಿ ವೈ ಎಸ್ಪಿ ಆರ್.ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ರಚಿಸಲಾದ ತಂಡ ಕಾರ್ಯಚರಣೆ ನಡೆಸಿದೆ.

Font Awesome Icons

Leave a Reply

Your email address will not be published. Required fields are marked *