ಶ್ರೀರಾಮ ಪರಾಣಪ್ರತಿಷ್ಠೆಗೆ ಆಮಂತ್ರಣವಿದ್ದರೂ ಕಾರ್ಯಕ್ರಮದ ದಿನ ಕೊಹ್ಲಿ ಅನುಷ್ಕಾ ದಂಪತಿ ಅಯೋಧ್ಯೆಯ ರಾಮಂದಿರಕ್ಕೆ ಹೋಗಿರದ ಕುರಿತು ವರದಿಯಾಗಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂಬ ಸುದ್ದಿಯೊಂದಿಗೆ ಅದಕ್ಕೆ ಸಾಕ್ಷಿಯೆಂಬಂತೆ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಚಿತ್ರದಲ್ಲಿ ಕೊಹ್ಲಿ ಕಪ್ಪು ಬಟ್ಟೆ ಧರಿಸಿರುವ ಫೋಟೋ ಹಾಗು ಅವರು ಹಾಗು ಅನುಷ್ಕಾ ಸನ್ಯಾಸಿಯೊಬ್ಬರೊಂದಿಗೆ ಇರುವ ಇನ್ನೊಂದು ಪೋಸ್ಟ್ ಕಾಣಬಹುದು. ಆದರೆ ಈ ಚಿತ್ರಗಳು ಅಯೋಧ್ಯೆಯಲ್ಲಿ ತೆಗೆದವುಗಳಲ್ಲ ಹಾಗು ಅವುಗಳೊಂದಿಗೆ ಹಂಚಿಕೊಳ್ಳಲಾದ ಮಾಹಿತಿಯೂ ನಿಜವಲ್ಲ.
ಕೊಹ್ಲಿ ಮತ್ತು ಮತ್ತು ಅನುಷ್ಕಾ ಶರ್ಮಾ ಅಯೋಧ್ಯೆಗೆ ಹೋಗಿದ್ದರು ಎಂಬ ಮಾಹಿತಿಯೊಂದಿಗೆ ಹರಿದಾಡುತ್ತಿರುವ ಆ ಎರಡೂ ಫೋಟೋಗಳು ಹಳೆಯವು. ವಿರಾಟ್ ಪಕ್ಕು ಬಟ್ಟೆ ಧರಿಸಿರುವ ಫೋಟೋ ೨೦೨೩ ಸೆಪ್ಟೆಂಬರ್ ನಲ್ಲಿ ಮುಂಬೈನ ಗಣೇಶ ಪೆಂಡಾಲ್ ಒಂದರಲ್ಲಿ ತೆಗೆದದ್ದು. ಅಂತೆಯೇ ಅವರು ಸಾಧುವಿನೊಂದಿಗೆ ಇದ್ದ ಚಿತ್ರ ಋಷಿಕೇಶದದ್ದು.
ಈ ಬಗ್ಗೆ ವರದಿ ಮಾಡಿರುವ ದಿ ಕ್ವಿಂಟ್ ಫ್ಯಾಕ್ಟ್ ಚೆಕ್, ಚಿತ್ರಗಳಿಗೂ ಅವರ ಅಯೋಧ್ಯಾ ಭೇಟಿಗೂ ಸಂಬಂಧವಿಲ್ಲವೆಂದು ಪ್ರಕಟಿಸಿದೆ