ಅಯೋಧ್ಯಾ: ಬಾಲರಾಮನ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನೆ ನಂತರ ಮತ್ತೂಂದು ಉತ್ಸವಕ್ಕೆ ದೇಗುಲ ನಗರಿ ಅಯೋಧ್ಯೆ ಸಜ್ಜಾಗಿದ್ದು, ಅ.28ರಿಂದ 31ರವರೆಗೆ ದೀಪೋತ್ಸವ ಆಯೋಜಿಸಲಾಗುತ್ತಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
ಭಕ್ತಿ ಮತ್ತು ಉತ್ಸವದ ಪ್ರತೀಕವಾದ ಈ ಕಾರ್ಯಕ್ರಮದಲ್ಲಿ 25 ಲಕ್ಷಕ್ಕೂ ಅಧಿಕ ದೀಪಗಳನ್ನು ರಾಮ್ ಕೀ ಪೌಡಿ, ನಯಾ ಘಾಟ್ ಸೇರಿದಂತೆ ಪ್ರಮುಖ ಘಾಟ್ಗಳಲ್ಲಿ ಬೆಳಗಲಾಗುತ್ತದೆ.ಅಯೋಧ್ಯೆಯ ದೃಶ್ಯ ವೈಭವವನ್ನು ಈ ಬಾರಿ ದೀಪೋತ್ಸವದಲ್ಲಿ ಪ್ರಸ್ತುತಪಡಿಸಲು ಸಂಪ್ರದಾಯ ಮತ್ತು ಆಧುನಿಕತೆ ಎರ ಡನ್ನೂ ಬಳಸುತ್ತಿದ್ದು ಬೆಳಕು ಬೀರುವ ಎಲ್ಇಡಿ ಪ್ಯಾನಲ್ಗಳು, ಲೇಸರ್ ಶೋ, ವರ್ಚುವಲ್ ರಿಯಾಲಿಟಿಗಳು ಬಳಸಲಾಗುತ್ತದೆ ಎಂದಿದೆ.