ಅಯೋಧ್ಯೆ ತಲುಪಿದ ವಿಶ್ವದ ಅತ್ಯಂತ ದುಬಾರಿ ರಾಮಾಯಣ ಪುಸ್ತಕ

ನವದೆಹಲಿ: ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾ ಸಮಾರಂಭಕ್ಕೆ ಜನವರಿ 22 ರಂದು ನಡೆಯಲಿದ್ದು, ವಿಶ್ವದ ಅತ್ಯಂತ ದುಬಾರಿ ರಾಮಾಯಣ ಪುಸ್ತಕ ಅಯೋಧ್ಯೆಯನ್ನು ತಲುಪಿದೆ.

ರಾಮ ಮಂದಿರ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಮಾಯಣದೊಂದಿಗೆ ಅಯೋಧ್ಯೆಗೆ ತಲುಪಿದ ಪುಸ್ತಕ ಮಾರಾಟಗಾರ ಮನೋಜ್ ಸತಿ ಮಾತನಾಡಿ, ‘ನಾವು ನಮ್ಮ ಸುಂದರವಾದ ರಾಮಾಯಣದೊಂದಿಗೆ ಅಯೋಧ್ಯೆಯಲ್ಲಿ ತಲುಪಿದ್ದೇವೆ ಎಂದು ಹೇಳಿದರು.

ಇದು ಮೂರು ಅಂತಸ್ತಿನ ಪೆಟ್ಟಿಗೆಯನ್ನು ಹೊಂದಿದ್ದು, ಮೂರು ಮಹಡಿಗಳೊಂದಿಗೆ ನಿರ್ಮಿಸಲಾಗುತ್ತಿರುವ ರಾಮ ಮಂದಿರದಂತೆ. ಆದ್ದರಿಂದ ಇದನ್ನು ಸಹ ಅದೇ ರೀತಿ ವಿನ್ಯಾಸಗೊಳಿಸಲಾಗಿದೆ. ಪುಸ್ತಕವನ್ನು ಓದಲು ಮೇಲಿನ ಮಹಡಿಯಲ್ಲಿ ಸ್ಟ್ಯಾಂಡ್ ಇದೆ.

ಪೆಟ್ಟಿಗೆಗಾಗಿ ಅಮೇರಿಕನ್ ವಾಲ್ನಟ್ ಮರವನ್ನು ಬಳಸಲಾಗಿದೆ.   ಪುಸ್ತಕಕ್ಕಾಗಿ ಶಾಯಿಯನ್ನು ಜಪಾನ್ ನಿಂದ ಆಮದು ಮಾಡಿದ್ದು,   ಇದು ಸಾವಯವ ಶಾಯಿ ಆಗಿದೆ.  ಇದರ ಕಾಗದವನ್ನು ಫ್ರಾನ್ಸ್ ನಲ್ಲಿ ತಯಾರಿಸಲಾಗಿದೆ. ಇದು ಆಸಿಡ್ ಮುಕ್ತ ಕಾಗದ. ಇದು ಪೇಟೆಂಟ್ ಪಡೆದ ಕಾಗದವಾಗಿದೆ. ಕಾಗದವನ್ನು ಈ ಪುಸ್ತಕದಲ್ಲಿ ಮಾತ್ರ ಬಳಸಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಎಲ್ಲಿಯೂ ಲಭ್ಯವಿಲ್ಲ ಎಂದು ಅವರು ಹೇಳಿದರು.

 

Font Awesome Icons

Leave a Reply

Your email address will not be published. Required fields are marked *