ರಾಮ ಲಕ್ಷ್ಮಣರು ವನವಾಸದಲ್ಲಿದ್ದಾಗ ಬಿಹಾರದಲ್ಲಿರುವ ಗಯಾ ಕ್ಷೇತ್ರಕ್ಕೆ ಬರುತ್ತಾರೆ. ಸೀತಾದೇವಿಯನ್ನು ಫಲ್ಗುಣಿ ನದಿಯ ದಂಡೆಯಲ್ಲಿ ಕೂಡಿಸಿ ಅವರಿಬ್ಬರು ಕಾಡಿಗೆ ಹೋಗುತ್ತಾರೆ. ಇದಾದ ಸ್ವಲ್ಪ ಹೊತ್ತಿನಲ್ಲೇ ನದಿಯ ಒಳಗಿನಿಂದ ಕೈಯೊಂದು ಹೊರಗೆ ಬರುತ್ತದೆ. ಸೀತಾದೇವಿ ನನಗೆ ಹಸಿವೆಯಾಗುತ್ತಿದೆ ಎಂದಂತಾಗುತ್ತದೆ. ಪದೇ ಪದೇ ಆ ಧ್ವನಿ ಮರುಕಳಿಸುತ್ತದೆ. ಆ ಧ್ವನಿ ದಶರಥ ಮಹಾರಾಜರಂತೆ ಇರುತ್ತದೆ. ಸೀತೆಗೆ ಏನು ಮಾಡುವುದೆಂದೇ ತೋಚುವುದಿಲ್ಲ.
ಬೇರೆ ದಾರಿ ಇಲ್ಲದೇ ಮರಳಿನ ಉಂಡೆಯನ್ನು ಮಾಡಿ ಅದರಲ್ಲಿ ಅನ್ನವನ್ನು ಆವಾಹನೆ ಮಾಡಿ ನದಿಯಿಂದ ಮೇಲೆ ಬಂದ ಕೈಯೊಳಗೆ ಇಡುತ್ತಾಳೆ. ನಂತರ ತನ್ನ ಕರ್ತವ್ಯಕ್ಕೆ ಐದು ಸಾಕ್ಷಿಗಳನ್ನು ಆಧಾರವಾಗಿ ಇಟ್ಟುಕೊಳ್ಳುತ್ತಾಳೆ.
ಸೀತೆ ನೀಡಿದ ಆಹಾರದಿಂದ ದಶರಥ ಸಂತುಷ್ಟನಾಗುತ್ತಾನೆ. ಹರಸಿ ಮರೆಯಾಗುತ್ತಾನೆ. ಇತ್ತ ರಾಮ ಲಕ್ಷ್ಮಣರು ಮರಳಿದಾಗ ಸೀತೆ ಅವರಿಗೆ ನಡೆದ ಸಂಗತಿಯೆಲ್ಲವನ್ನೂ ವಿವರಿಸುತ್ತಾಳೆ. ರಾಮ ಲಕ್ಷ್ಮಣರಿಗೆ ಮೊದಲಿಗೆ ಸೀತೆಯ ಮಾತಿನ ಮೇಲೆ ನಂಬಿಕೆ ಬರುವುದಿಲ್ಲ. ಆಗ ಸೀತೆ ತನ್ನ ಕೃತ್ಯಕ್ಕೆ ಫಲ್ಗುಣಿ ನದಿ, ತುಳಸೀ ಗಿಡ, ಹಸು, ಬ್ರಾಹ್ಮಣ ಮತ್ತು ಅರಳಿಮರವೇ ಸಾಕ್ಷಿ ಎನ್ನುತ್ತಾಳೆ. ಆದರೆ ಸೀತೆಯ ಸಹಾಯಕ್ಕೆ ಅರಳಿ ಮರದ ಹೊರತಾಗಿ ಮತ್ಯಾರು ಬರುವುದಿಲ್ಲ. ಅರಳೀ ಮರ ಸಾಕ್ಷ್ಯ ನುಡಿಯುತ್ತದೆ. ರಾಮ, ಲಕ್ಷ್ಮಣರು ಸೀತೆಯ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸುತ್ತಾರೆ.
ಆದರೆ ಸೀತೆ ತನ್ನ ಮಾತಿಗೆ ವಿರುದ್ದವಾಗಿ ನಡೆದುಕೊಂಡ ಫಲ್ಗುಣಿ ನದಿ, ಹಸು, ಬ್ರಾಹ್ಮಣ ಮತ್ತು ತುಳಸಿ ಗಿಡಕ್ಕೆ ಶಾಪ ಕೊಡುತ್ತಾಳೆ. ಫಲ್ಗುಣಿ ನದಿಗೆ ಮಳೆಗಾಲದಲ್ಲೂ ಸಹ ನಿನ್ನ ಪಾತ್ರಕ್ಕೆ ಎಷ್ಟೇ ನೀರು ಬಂದರೂ ಬರಿದಾಗಲಿ. ನೀರು ನೆಲದ ಒಳಗೇ ಉಳಿದುಕೊಳ್ಳಲಿ. ಹೇ ವಿಪ್ರೋತ್ತಮ ನೀನು ಸತ್ಯ ಹೇಳದೇ ನನಗೆ ಮೋಸ ಮಾಡಿದೆ. ಹೀಗಾಗಿ ನೀನು ಈ ಕ್ಷೇತ್ರದಲ್ಲೇ ಇದ್ದು ಕ್ಷೇತ್ರಕ್ಕೆ ಬರುವ ಯಾತ್ರಿಕರನ್ನು ಪೀಡಿಸಿ ಅದರಿಂದ ಬಂದ ಲಾಭದಿಂದ ಜೀವನ ನಡೆಸು.
ಗೋಮಾತೆ ನೀನು ಜಗವ ಬೆಳಗಬೇಕಾದವಳು. ಆದರೆ ನೀನು ನನ್ನ ಮಾತು ಮೀರಿ ಲೋಭತನ ಮೆರೆದೆ. ಹಾಗಾಗಿ ಗಯಾ ಕ್ಷೇತ್ರದಲ್ಲೇ ಇದ್ದುಕೊಂಡು ಅವರಿವರು ಪಿಂಡವನ್ನು ತಿನ್ನುತ್ತಾ ಜೀವನ ಸಾಗಿಸು. ಎಷ್ಟು ತಿಂದರೂ ನಿನ್ನ ಹೊಟ್ಟೆ ತುಂಬದಿರಲಿ. ತುಳಸಿ ಮಾತೆ ನೀನು ಪವಿತ್ರಳಾದವಳು. ನೀನು ಸಹ ನನಗೆ ಹೀಗೆ ಮಾಡುತ್ತೀಯ ಎಂದುಕೊಂಡಿರಲಿಲ್ಲ. ಹಾಗಾಗಿ ನೀನು ಎಲ್ಲೆಂದರಲ್ಲಿ ಬೆಳೆಯುವಂತಾಗಲಿ.
ಸೀತೆಯ ಶಾಪದಂತೆ ಫಲ್ಗುಣಿ ನದಿ ಬತ್ತಿಹೋಗಿದೆ. ನದಿಯೊಳಗಿನ ಮರಳನ್ನು ಅಗೆದಾಗಲಷ್ಟೇ ಇಂದಿಗೂ ನೀರು ಬರುತ್ತದೆ. ಫಲ್ಗುಣಿ ನದಿ ತೀರದಲ್ಲಿರುವ ಹಸುಗಳಿಗೆ ಪಿಂಡಗಳೇ ಆಹಾರ. ಅವು ಎಷ್ಟು ಹಸಿದಿರುತ್ತವೆ ಎಂದರೆ ಕೆಲವೊಮ್ಮೆ ಪಿಂಡ ವಿಸರ್ಜನೆಗೂ ಅವಕಾಶ ಕೊಡದೆ ಬಾಯಿ ಹಾಕುತ್ತದೆ. ನಂತರ ಸೀತೆಯ ದೃಷ್ಟಿ ಅರಳೀ ಮರದತ್ತ ಬೀಳುತ್ತದೆ. ಆಕೆ ಪರಮ ಸಂತೋಷದಿಂದ ಆಶೀರ್ವದಿಸುತ್ತಾಳೆ. ಅಂದಿನಿಂದ ಅರಳಿ ಮರ ಬಾಡದೆ ಸದಾ ನಳನಳಿಸುತ್ತಿದೆ.
ಇನ್ನು ಡಾ.ವ್ಯಾಟ್ಸ್ ಪ್ರಕಾರ, ಮನೆಯಲ್ಲಿ ಎಲ್ಲಿಯಾದರೂ ಅರಳಿ ಮರವನ್ನು ಬೆಳೆಸುವುದು ಅಶುಭ. ಅರಳಿ ಮರವು ದೇವತೆಗಳ ವಾಸಸ್ಥಾನ ಎಂದು ನಂಬಲಾಗಿದೆ, ಆದರೆ ಅದು ಮನೆಯಲ್ಲಿ ಬೆಳೆದರೆ ಅದು ಪಿತೃ ದೋಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಅದರ ಉಪಸ್ಥಿತಿಯು ಕುಟುಂಬದ ಅಪಶ್ರುತಿಯನ್ನು ಸೂಚಿಸುತ್ತದೆ. ಯಾವುದೇ ಸಂದರ್ಭದಲ್ಲೂ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅರಳಿ ಮರದ ಬೇರುಗಳು ದಟ್ಟವಾಗಿ, ದಪ್ಪವಾಗಿ ಮತ್ತು ಹರಡಿಕೊಂಡಿರುವುದು ಇದಕ್ಕೆ ಒಂದು ಕಾರಣ. ಇಂತಹ ಸಂದರ್ಭದಲ್ಲಿ ಮನೆಯ ಗೋಡೆಯಲ್ಲಿ ಅರಳಿ ಮರ ಬೆಳೆದರೆ ಮನೆಯಲ್ಲಿ ಬಿರುಕು ಮೂಡುತ್ತದೆ. ಇದು ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ವಾಸ್ತು ಪ್ರಕಾರ, ಅರಳಿ ಮರವು ಮನೆಯಲ್ಲಿರುವ ಜನರ ಸ್ವಭಾವದ ಮೇಲೂ ಪರಿಣಾಮ ಬೀರುತ್ತದೆ.
ಕುಟುಂಬದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಉಂಟಾಗುತ್ತದೆ. ಅಂದರೆ ಪೂರ್ವಜರು ಕೋಪಗೊಳ್ಳುತ್ತಾರೆ. ಇನ್ನು ಇದರಿಂದ ಜೀವನದಲ್ಲಿ ಅಶುಭ ಘಟನೆಗಳು ಸಂಭವಿಸುತ್ತವೆ, ಇದು ಹಣದ ನಷ್ಟ ಮತ್ತು ವೈಫಲ್ಯವನ್ನು ಉಂಟುಮಾಡುತ್ತದೆ. ಮನೆಯಲ್ಲಿ ಅರಳಿ ಮರವನ್ನು ಬೆಳೆಸುವುದರಿಂದ ಗ್ರಹಗಳ ಕೋಪವನ್ನು ತೋರಿಸುತ್ತದೆ ಎಂದು ನಂಬಲಾಗಿದೆ. ಗ್ರಹಗಳು ಕೋಪಗೊಂಡಿದ್ದರೆ, ನಿಮ್ಮ ದಿಕ್ಕು ಮತ್ತು ಪರಿಸ್ಥಿತಿಯು ಹದಗೆಡುತ್ತದೆ ಎಂದು ನಂಬಲಾಗಿದೆ.
ಮನೆಯ ಹೊರಗೆ ಅರಳಿ ಗಿಡ ಬೆಳೆದರೆ ಅದನ್ನು ಪೂಜಿಸಿ ಹೊರತೆಗೆದು ಕುಂಡದಲ್ಲಿ ನೆಡಬೇಕು. ಸಸ್ಯವನ್ನು ತೆಗೆದುಹಾಕುವಾಗ, ಅದರ ಬೇರುಗಳನ್ನು ಮರೆತೂ ಕೂಡ ಕತ್ತರಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಧಾರ್ಮಿಕ ಗ್ರಂಥಗಳಲ್ಲಿ, ಅರಳಿ ಮರದ ಮೇಲೆ ಬ್ರಹ್ಮ ದೇವನು ವಾಸವಾಗಿರುತ್ತಾನೆ ಎನ್ನುವ ನಂಬಿಕೆಯಿದೆ. ಒಂದು ವೇಳೆ ಅರಳಿ ಮರವನ್ನು ಮನೆಯಲ್ಲಿ ನೆಡಬೇಕೆಂದಿದ್ದರೆ ಅದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಎಂದಿಗೂ ನೆಡಬೇಡಿ. ಇದು ಮನೆಯಲ್ಲಿ ಹಣದ ಕೊರತೆಗೆ ಕಾರಣವಾಗುತ್ತದೆ.