ನವದೆಹಲಿ: ಆಪಲ್’ಗೆ ಬಿಗ್ ಶಾಕಿಂಗ್ ಸುದ್ದಿ ಸಿಕ್ಕಿದ್ದು, ಆಪಲ್ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮೈಕ್ರೋಸಾಫ್ಟ್ ಹೊರಹೊಮ್ಮಿದೆ.
ವಾಷಿಂಗ್ಟನ್ ಮೂಲದ ಮೈಕ್ರೋಸಾಫ್ಟ್ ರೆಡ್ಮಂಡ್ನ ಷೇರುಗಳು 1.5% ರಷ್ಟು ಏರಿಕೆಯಾಗಿದ್ದು, 2.888 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ನೀಡಿದೆ. ಆಪಲ್ 2.887 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ 0.3% ಕಡಿಮೆಯಾಗಿದೆ. ಹೌದು. . 2024ರಲ್ಲಿ ಆಪಲ್ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿರುವ ಅಂದಾಜಿನಲ್ಲಿ ಈ ವಾರ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದೆ. ಇನ್ನೊಂದೆಡೆ ಮೈಕ್ರೋಸಾಫ್ಟ್ ಷೇರು ಬೆಲೆಯಲ್ಲಿ ಏರಿಕೆಯಾಗಿದ್ದು, ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಶ್ರೇಯ ಸಂಪಾದಿಸಿದೆ.
ವಾಷಿಂಗ್ಟನ್ ಮೂಲಕ ಮೈಕ್ರೋಸಾಫ್ಟ್ ಕಂಪನಿಯ ಷೇರು ಬೆಲೆಗಳಲ್ಲಿ ಶೇ. 1.6ರಷ್ಟು ಏರಿಕೆ ಆಗಿದ್ದರಿಂದ ಈ ಕಂಪನಿಯ ಮಾರುಕಟ್ಟೆ ಮೌಲ್ಯ 2.875 ಟ್ರಿಲಿಯನ್ ಯುಎಸ್ ಡಾಲರ್ ದಾಟಿತು. ಅರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಹಣ ಸಂಪಾದಿಸುವ ಕಂಪನಿಗಳ ರೇಸ್‌ನಲ್ಲಿ ಮೈಕ್ರೋಸಾಫ್ಟ್ ಮುಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಂಪನಿಯ ಷೇರುಗಳಲ್ಲಿ ಏರಿಕೆಯಾಗಿದೆ.
ಇನ್ನು ಆಪಲ್ ಕಂಪನಿಯ ಷೇರುಗಳು ಶೇ. 0.9ರಷ್ಟು ಕುಸಿದು ಅದರ ಮಾರುಕಟ್ಟೆ ಮೌಲ್ಯ 2.871 ಟ್ರಿಲಿಯನ್ ಯುಎಸ್ ಡಾಲರ್ ಎನಿಸಿಕೊಂಡಿತು. 2021ರ ಬಳಿಕ ಇದೇ ಮೊದಲ ಬಾರಿಗೆ ಮಾರುಕಟ್ಟೆ ಮೌಲ್ಯದಲ್ಲಿ ಆಪಲ್ ಕಂಪನಿ ಮೈಕ್ರೋಸಾಫ್ಟ್‌ಗಿಂತ ಕೆಳಗೆ ಇಳಿದಿದೆ. ಜನವರಿಯಲ್ಲಿ ಈವರೆಗೆ ಕ್ಯಾಲಿಫೋರ್ನಿಯಾ ಮೂಲದ ಆಪಲ್ ಕಂಪನಿಯ ಷೇರುಗಳು ಶೇ. 3.3ರಷ್ಟು ಕುಸಿದಿದ್ದರೆ, ಮೈಕ್ರೋಸಾಫ್ಟ್ ಕಂಪನಿಯ ಷೇರುಗಳು ಶೇ. 1.8ರಷ್ಟು ಏರಿಕೆ ಕಂಡಿದೆ.
“ಮೈಕ್ರೋಸಾಫ್ಟ್ ವೇಗವಾಗಿ ಬೆಳೆಯುತ್ತಿರುವ ಕಾರಣ ಮೈಕ್ರೋಸಾಫ್ಟ್ ಆಪಲ್ ಅನ್ನು ಹಿಂದಿಕ್ಕುವುದು ಅನಿವಾರ್ಯವಾಗಿತ್ತು ಮತ್ತು ಈಗಾಗಲೇ AI ಕ್ರಾಂತಿಯಿಂದ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ” ಎಂದು ಗಿಲ್ ಲೂರಿಯಾದ ವಿಶ್ಲೇಷಕ ಡಿ.ಎ. ಡೇವಿಡ್ಸನ್ ಹೇಳಿದ್ದಾರೆ.
ಇನ್ನು ಆಪಲ್ ಷೇರುಗಳು ಕುಸಿತಕ್ಕೆ, “ಐಫೋನ್ ಮಾರಾಟ ಕಡಿಮೆಯಾಗಿರುವುದು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಚೀನಾದಂಥ ಪ್ರಮುಖ ಮಾರುಕಟ್ಟೆಯಲ್ಲಿ ಆಪಲ್ ಮಾರಾಟ ಇನ್ನಷ್ಟು ಕುಸಿತವಾಗಿದೆ ಎನ್ನಲಾಗ್ತಿದೆ.