ನವದೆಹಲಿ: ಫೆಬ್ರವರಿ ೧ ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಆ ಮೂಲಕ ಈ ಮುಂಚೆ ಹಣಕಾಸು ಸಚಿವರಾಗಿದ್ದು ಸತತ ಐದು ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಮತ್ತು ಯಶವಂತ್ ಸಿನ್ಹಾರ ದಾಖಲೆಗಳನ್ನು ಹಿಂದಿಕ್ಕಲಿದ್ದಾರೆ.
ಸೀತಾರಾಮನ್ ಮಂಡಿಸಲಿರುವ ೨೦೨೪-೨೫ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಪಾಲಿಸಲಾಗುತ್ತದೆ.
ಲೋಕಸಭೆಯ ಚುನಾವಣೆ ಹತ್ತಿರದಲ್ಲಿರುವ ಸಂದರ್ಭದಲ್ಲಿ ಪ್ರಮುಖ ನೀತಿ ಬದಲಾವಣೆ, ಪ್ರಮುಖ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆಯಿದ್ದು, ಕಳೆದ ತಿಂಗಳಲ್ಲಿ ಸೀತಾರಾಮನ್ ಇದರ ಸ್ಪಷ್ಟ ಸೂಚನೆ ನೀಡಿದ್ದರು. ಚುನಾವಣಾನಂತರ ರಚನೆಯಾಗುವ ಸರ್ಕಾರ ೨೦೨೪-೨೫ರ ಪೂರ್ಣ ಬಜೆಟ್ ಮಂಡಿಸಲಿರುವುದರಿಂದ ಮಧ್ಯಂತರ ಬಜೆಟ್ ಪ್ರಮುಖ ನೀತಿ ಘೋಷಣೆಗಳನ್ನು ಒಳಗೊಂಡಿರುವುದಿಲ್ಲ.
೨೦೧೯ರ ಸಾರ್ವತ್ರಿಕ ಚುನಾವಣೆಯ ನಂತರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್, ಇಂದಿರಾ ಗಾಂಧಿಯ ನಂತರ ಬಜೆಟ್ ಮಂಡಿಸಿದ ಎರಡನೇ ಮಹಿಳೆ.