ಆಶಿಶ್ ಎಂ ರಾವ್ ವಾಮಂಜೂರು ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಗೆ ಆಯ್ಕೆ

ಬಂಟ್ವಾಳ : ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ ಬಂಟ್ವಾಳ ಚಿಣ್ಣರ ಲೋಕ ಸೇವಾ ಬಂಧು ರಿಜಿಸ್ಟರ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ನಡೆಯುವ,

ಕರಾವಳಿ ಕಲ್ವೋತ್ಸವ 2024 25 ಮತ್ತು ಬಹು ಸಂಸ್ಕೃತಿ ಸಂಭ್ರಮದಲ್ಲಿ ಪ್ರಥಮ ವರ್ಷದ ಎಜೆ ಇಂಜಿನಿಯರ್ ಕಾಲೇಜ್ ವಿದ್ಯಾರ್ಥಿಯಾದ ಬಹುಮುಖ ಪ್ರತಿಭೆ ಆಶಿಶ್ಎಂ ರಾವ್ ಅವರ ಕಲಾ ಪ್ರತಿಭೆಯನ್ನು ಗುರುತಿಸಿ,

ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಯನ್ನು ಡಿಸೆಂಬರ್ 20ರಂದು ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನ ಬಿ ಸಿ ರೋಡ್ ಬಂಟ್ವಾಳ ತಾಲೂಕಿನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಂಸ್ಥೆಯ ಪ್ರಧಾನ ಸಂಚಾಲಕರಾದ ಮೋಹನದಾಸ ಕೊಟ್ಟಾರಿಯವರು ತಿಳಿಸಿದ್ದಾರೆ ಇವರು ಭವಿಷ್ಯ ನಿಧಿ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಮಧುಸೂದನ ಹಾಗೂ ರಾಜಶ್ರೀ ಅವರ ಸುಪುತ್ರ.

Font Awesome Icons

Leave a Reply

Your email address will not be published. Required fields are marked *