ಆ ಘಟನೆ ಬಳಿಕ ಎರಡು ದಿನ ಕೊಠಡಿಯಲ್ಲಿ ಕಣ್ಣೀರಿಟ್ಟಿದ್ದೆ : ಶಿಲ್ಪಿ ಅರುಣ್‌ ಯೋಗಿರಾಜ್‌ – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

website developers in mysore

ಮೈಸೂರು, ಮಾ.೦೨, ೨೦೨೪ :  ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ವಿಗ್ರಹದ ಹಿಂದಿರುವ ನುರಿತ ಕುಶಲಕರ್ಮಿ ಯೋಗಿರಾಜ್ ಅವರ ಅನುಭವದ ಮೂಟೆಯಲ್ಲಿ ಹಲವಾರು ಆಸಕ್ತಿದಾಯಕ ಘಟನೆಗಳು ಹೊರ ಬರುತ್ತಲೇ ಇವೆ.

ಮೊದಲ ವಿಗ್ರಹವನ್ನು ಕೆತ್ತಲು ಬಳಸಿದ ಆರಂಭಿಕ ಕಲ್ಲು ನಿರ್ಣಾಯಕ ಪರೀಕ್ಷೆಯಲ್ಲಿ ವಿಫಲವಾಯಿತಿ. ಆ ನಂತರ ಯೋಗಿರಾಜ್ ಅವರು ಪ್ರತಿಮೆಯನ್ನು ಪುನಃ ಕೆತ್ತಲು ಆರಂಭಿಸಿದರು. ಇದೀಗ ಆಯ್ಕೆಗೊಂಡಿರುವ ವಿಗ್ರಹ, ತಮ್ಮ ಎರಡನೇ ಪ್ರಯತ್ನ ಎಂದು ಯೋಗಿರಾಜ್‌ ಬಹಿರಂಗಪಡಿಸಿದರು.

todays best offer : https://amzn.to/433VHJk

ಪ್ರತಿಮೆಯನ್ನು ಪರಿಪೂರ್ಣವಾಗಿ ರೂಪಿಸಿದ ನಂತರವೂ ಸವಾಲುಗಳು ಮುಂದುವರೆದವು. ಯೋಗಿರಾಜ್ ಅವರ ಆರಂಭಿಕ ಒತ್ತಡವನ್ನು ನಿವಾರಿಸಲು ಎಲ್ & ಟಿ ಎಂಜಿನಿಯರ್‌ಗಳು ವಿಗ್ರಹವನ್ನು ಗರ್ಭಗುಡಿಯೊಳಗೆ ಸುರಕ್ಷಿತವಾಗಿ ಸಾಗಿಸಲು ಮತ್ತು ಇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಆದರೆ, ಪ್ರತಿಷ್ಠಾಪಿಸಿದ ಕೆಲವೇ ಗಂಟೆಗಳಲ್ಲಿ ವಿಗ್ರಹದ ಫೋಟೋ ವೈರಲ್ ಆಗಿದ್ದರಿಂದ ಸಮಾಧಾನದ ಕ್ಷಣ ಕಣ್ಮರೆಯಾಯಿತು.

ನಾನು ಮತ್ತೆ ಒತ್ತಡದಲ್ಲಿದ್ದೆ. ಏಳು ತಿಂಗಳಿಂದ ನನ್ನ ಹೆಂಡತಿಗೂ ಸಹ ಯಾವುದೇ ಫೋಟೋ ಕಳುಹಿಸಿರಲಿಲ್ಲ. ಇಂಥ ಸ್ಥಿತಿಯಲ್ಲಿ ಫೋಟೋ ಬಹಿರಂಗಗೊಂಡದ್ದರಿಂದ ನಾನು ತುಂಬಾ ಅಸಮಾಧಾನಗೊಂಡೆ. ನನಗೇಕೆ ಹೀಗಾಯಿತು ಎಂದು ಎರಡು ದಿನ ಕೊಠಡಿಯಲ್ಲಿ ಕಣ್ಣೀರಿಟ್ಟಿದ್ದೆ ಎಂದು ಯೋಗಿರಾಜ್ ಘಟನೆಯನ್ನು ಮೆಲುಕು ಹಾಕಿದರು.

ಆದರೆ, ಶುದ್ಧೀಕರಣ ಮತ್ತು ಪ್ರತಿಷ್ಠಾಪನೆಯ ನಂತರ ವಿಗ್ರಹವು ವಿಭಿನ್ನವಾಗಿ ಕಾಣುತ್ತದೆ. ಇದರ ದರ್ಶನ ಪಡೆದಾಗ ಹಿಂದಿನ ಕಹಿ ಘಟನೆ ಮರೆತೆ ಎಂದರು

ಕೃಪೆ : ಫ್ರೀ ಪ್ರೆಸ್‌ ಜರ್ನಲ್.‌

key words :  Sculptor Arun Yogiraj ̲  Successfully Crafted ̲  Ram Lalla Idol ̲  After Failed First Attempt ̤

english summary :

The saga of the idol’s journey did not end with its completion. As Yogiraj reminisced, the challenges persisted even after the statue was crafted to perfection.

However, the moment of relief was evaporated when the photo of the idol went viral within hours of its placement.

“I was in stress again. I had not sent any photo to my wife in seven months. and I got very upset. I kept crying in the room for two days wondering why this happened to me,” Yogiraj said.

 

 

website developers in mysore

Font Awesome Icons

Leave a Reply

Your email address will not be published. Required fields are marked *