ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮುಂದುವರೆದಿದೆ, ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇದ್ದರೆ, ಚಿತ್ರದುರ್ಗ, ದಾವಣಗೆರೆ, ಹಾಸನ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಾರವಾರ, ಆಗುಂಬೆ, ಕೋಟ, ಶೃಂಗೇರಿ, ಕೊಲ್ಲೂರು, ಕುಂದಾಪುರ, ಅಂಕೋಲಾ, ಗೋಕರ್ಣ, ಸಿದ್ದಾಪುರ, ಕುಮಟಾ, ಜೋಯಿಡಾ, ಧರ್ಮಸ್ಥಳ, ಗೇರುಸೊಪ್ಪ, ಮಂಕಿ, ಕೊಪ್ಪ, ಜಯಪುರ, ಚಿಕ್ಕಮಗಳೂರು, ಕಮ್ಮರಡಿ, ಕ್ಯಾಸಲ್ರಾಕ್, ಕದ್ರಾ, ಕೂಡಲಸಂಗಮ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಲಿಂಗನಮಕ್ಕಿ, ಬನವಾಸಿ, ಶಿರಾಲಿ, ಬೆಳ್ತಂಗಡಿ, ಆಲಮಟ್ಟಿ, ಲೋಂಡಾ, ಮುದ್ದೇಬಿಹಾಳ, ಹುಂಚದಕಟ್ಟೆ, ಕಾರ್ಕಳ, ಉಡುಪಿ, ಕಿರವತ್ತಿ, ಯಲ್ಲಾಪುರ, ಹಳಿಯಾಳ, ಮುಂಡಗೋಡ, ಲಕ್ಷ್ಮೇಶ್ವರ, ಚಿಕ್ಕೋಡಿ, ಸವಣೂರು, ಕಲಘಟಗಿ, ಹಾವೇರಿ, ಲಿಂಗಸುಗೂರು, ಹೆಸರಘಟ್ಟ, ಭಾಗಮಂಡಲದಲ್ಲಿ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿಯಲ್ಲಿ ಕೂಡ ಮಳೆಯಾಗಲಿದೆ.