ಇಂದು ‘ಕಾಂತಾರ 2’ ಬಗ್ಗೆ ಬಿಗ್ ಅಪ್​ಡೇಟ್: ಫಸ್ಟ್ ಲುಕ್ ನೋಡಲು ಕ್ಷಣಗಣನೆ ಶುರು

‘ಕಾಂತಾರ’ ಸಿನಿಮಾ ರಿಲೀಸ್ ಆಗಿ ವರ್ಷದ ಮೇಲಾಗಿದೆ. ಈ ಚಿತ್ರಕ್ಕೆ ಪ್ರೀಕ್ವೆಲ್ ಬರಲಿದೆ ಎಂದು ಈ ಮೊದಲೇ ಘೋಷಣೆ ಆಗಿತ್ತು. ಸಿನಿಮಾ ಶೂಟಿಂಗ್ ಶುರುವಿನ ಬಗ್ಗೆ ಆಗೊಂದು, ಈಗೊಂದು ಸುದ್ದಿ ಹರಿದಾಡುತ್ತಲೇ ಇತ್ತು.

ಆದರೆ, ಯಾವುದೂ ಅಧಿಕೃತ ಆಗಿರಲಿಲ್ಲ. ಈಗ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಈ ಬಗ್ಗೆ ಮಾಹಿತಿ ಸಿಕ್ಕಿದೆ. ‘ಕಾಂತಾರ 2’ ಚಿತ್ರದ ಫಸ್ಟ್ ಪೋಸ್ಟರ್ ನವೆಂಬರ್ 27ರ ಇಂದು ಮಧ್ಯಾಹ್ನ 12:25ಕ್ಕೆ ಅನಾವರಣಗೊಳ್ಳಲಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಗೆದ್ದಿದ್ದರು. ಎರಡು ಶೇಡ್​ನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ದೈವ ಬಂದಂತೆ ಆಡುವಾಗ ಅವರ ಹಾವ-ಭಾವ ನೋಡಿ ಎಲ್ಲರೂ ಬೆಕ್ಕಸ ಬೆರಗಾಗಿದ್ದರು. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.

‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ. ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ನವೆಂಬರ್ 27, ಮಧ್ಯಾಹ್ನ 12:25ಕ್ಕೆ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.

ಇನ್ನು ಕಾಂತಾರ 2 ನಿಜವಾಗಿ ಕಾಂತಾರದ ಪೂರ್ವ ಕತೆಯಾಗಿರುವುದರಿಂದ ಕಾಂತಾರ ಅಧ್ಯಾಯ 1 ಎಂದೂ ಕರೆಯಲಾಗುತ್ತಿದೆ.

 

Font Awesome Icons

Leave a Reply

Your email address will not be published. Required fields are marked *