ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ, ಮಗಳ ಫೋಟೋ ವೈರಲ್ ಮಾಡ್ತಿರೋ ಇನ್ಸಾ ಗ್ರಾಮ್ ID ಬ್ಲಾಕ್ ಮಾಡುವಂತೆ ನೇಹಾ ತಾಯಿ ಗೀತಾ ಹಿರೇಮಠ ಸಿ.ಇ.ಎನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
fayazneha2024 80 ವೈರಲ್ ಹಿನ್ನಲೆ ನೇಹಾ ತಾಯಿ ದೂರು ನೀಡಿದರು. ಫಯಾಜ್ ಹಾಗೂ ನೇಹಾ ಇರೋ ಸುಳ್ಳು ಭಾವಚಿತ್ರ ಹರಿಬಿಡುತ್ತಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಕಳೆದ 18 ರಂದು ಬಿವಿಬಿ ಕಾಲೇಜ್ ನಲ್ಲಿ ನೇಹಾ ಕೊಲೆಯಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಈ ಮಧ್ಯೆ fayazneha2024 ಎಂಬ ಮೂರು ಇನ್ಸಾ ಗ್ರಾಮ್ ಅಕೌಂಟ್ ನಿಂದ ಪೋಟೋ ವೈರಲ್ ಮಾಡ್ತಿದ್ದಾರೆ. ಹೀಗಾಗಿ ಸಿಇಎನ್ ಕ್ರೈಮ್ ಗೆ ನೇಹಾ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದರು.