ಶಿವಮೊಗ್ಗ: ಬೆಳಿಗ್ಗೆ ಉಕ್ಕಿನಮನುಷ್ಯ ಅಮಿತ್ ಶಾ ಕರೆ ಮಾಡಿದ್ದಾರೆ. ಅವರ ಮನವೊಲಿಸಿ ನಾನು ಸ್ಪರ್ಧೆ ಮಾಡುವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು ̤ ನಗರದ ಶುಭಮಂಗಳದಲ್ಲಿ ರಾಷ್ಟ್ರಭಕ್ತರ ಬಳಗದವತಿಯಿಂದ ಹಮ್ಮಿಕೊಳ್ಳಲಾದ ನಗರ ಮಟ್ಟದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾರಿಕಾಂಬ ಮತ್ತು ಓಂಶಕ್ತಿಯ ಆಶೀರ್ವಾದ ಲೋಕಸಭಾ ಸದಸ್ಯನಾಗುವೆ. ಮುಂದಿನಗಳಲ್ಲಿ ಮಾರಿಕಾಂಬ ಮತ್ತು ಓಂ ಶಕ್ತಿ ಮಹಿಳೆಯರನ್ನ ಕಾಶಿ ಯಾತ್ರೆಗೆ ಕರೆದುಕೊಂಡು ಹೋಗುವೆ ಎಂದು ಭರವಸೆ ನೀಡಿದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ಮಾಡಿದಾಗ ಬಿಎಸ್ ಯಡಿಯೂರಪ್ಪನವರಿಗೆ ಇಷ್ಟ ಆಗಲಿಲ್ಲ. ನಿಂತುಹೋಯ್ತು.
ನಂತರ ನನ್ನ ವಿರುದ್ಧ ಪ್ರಕರಣ ದಾಖಲಾಯಿತು. ದೇವರ ಆಶೀರ್ವಾದದಿಂದ ಪ್ರಕರಣ ನಿರ್ದೋಷಿ ಎಂದು ಪ್ರಕಟವಾಯಿತು. ಎರಡು ಮೂರು ದಿನಗಳಲ್ಲಿ ಸಚಿವ ಸ್ಥಾನ ದೊರೆಯಬೇಕಿತ್ತು. ಅದು ಕೊನೆಯವರೆಗೂ ಸಾಧ್ಯವಾಗಲಿಲ್ಲ
ನಂತರ ಚುನಾವಣೆ ಸ್ಪರ್ಧೆಯಿಂದಲೂ ಹಿಂದೆ ಸರಿಯುವಂತೆ ಸೂಚನೆ ಬಂತು. ಹಿಂದೆ ಸರಿದೆ. ಬಿಎಸ್ ವೈ, ಅನಂತ್ ಕುಮಾರ್ ಮತ್ತು ನನ್ನ ಶ್ರಮದಿಂದ 108 ಸ್ಥಾನಕ್ಕೆ ಏರಿತ್ತು. ಆದರೆ ಅಪ್ಪಮಕ್ಕಳ ಕೈಯಲ್ಲಿ ಪಕ್ಷ 66 ಕ್ಕೆ ಬಂತು. ಕುಟುಂಬ ರಾಜಕಾರಣದಿಂದ ಮುಕ್ತ ಮಾಡಬೇಕಿದೆ. ನಾನು ಗೆದ್ದು ಮುಕ್ತ ಮಾಡುವೆ ಎಂದರು.
ಸಿಟಿ ರವಿ ಯತ್ನಾಳ್, ಅನಂತಕುಮಾರ್ ಹೆಗಡೆಗೆ ಅನ್ಯಯವಾಗಿದೆ. ಹಿಂದೂ ಹೋರಾಟಗಾರರಿಗೆ ಸ್ಥಾನ ಸಿಗಲಿಲ್ಲ. ಶುದ್ದೀಜರಣದ ಹೊರಾಟದ ಬಗ್ಗೆ ಎಲ್ಲರೂ ಹೊಗಳುತ್ತಿದ್ದಾರೆ. ಧರ್ಮ ಉಳಿಯಬೇಕಿದೆ. ದೇವರ ಬಳಿ ನೀವು ಹಿಂದೂ ಸಂಸ್ಕೃತಿ ಉಳಿಯಲಿ ಎಂದು ಪ್ರವಾಸ ಮಾಡ್ತಾ ಇದ್ದೀರಿ. ನಮ್ಮ ಕೊನೆ ಉಸಿರುವ ಇರುವ ತನಕ ಪ್ರವಾಸಕ್ಕೆ ಬೆಂಬಲಿಸುವುದಾಗಿ ಪ್ರಕಟಿಸಿದರು.
ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆಕೇವಲ ಎಂಪಿಗಾಗಿ ಅಲ್ಲ. ಪಕ್ಷ ಶುದ್ಧೀಕರಣಕ್ಕೆ. ಶಿಕಾರಿಪುರದಲ್ಲಿ ವಿಜೇಂದ್ರ ಗೆಲ್ಲಲು ಲೆಕ್ಕವಿಲ್ಲ. ಧರ್ಮ ಗೆಲ್ಲತೋ ದುಡ್ಡುಗೆಲ್ಲತ್ತೋ ನೋಡೋಣ ಎಂದು ಸವಾಲು ಎಸೆದಿದ್ದಾರೆ.
ಸಾಧು ಸಂತರ ಬಳಿ ಹೋಗಿಬಂದಾಗ ಸಾಧು ಸಂತರಿಗೆ ಮತ್ತು ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ. ಬೆಳಿಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ನಿಮ್ಮ ಮನೆ ಸುತ್ತಮುತ್ತ ಓಡಾಡಿ ನನಗೆ ಮತಹಾಕಲು ಪ್ರಾರ ನಡೆಸಿ. ಇದು ಬಿಜೆಪಿ ಕೇಂದ್ರ ನಾಯಕರ ಗಮನಕ್ಕೆ ಬರಬೇಕು. ನಿಮ್ಮೋಡಾಟದಿಂದ ದೇವರೇ ಸ್ವತಃ ಬಂದು ಶಕ್ತಿ ತುಂಬಿದಂತಾಗುತ್ತದೆ.
ನಿಮ್ಮ ಓಡಾಟ ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಆರಂಭವಾಗಲಿ ಏ.12 ರಂದು ನಾಮಪತ್ರ ಸಲ್ಲಿಸಲು ನಡೆಯುವ ಮೆರವಣಿಗೆಯಿಂದ ನಿಮ್ಮ ಪ್ರಚಾರ ಆರಂಭವಾಗಲಿ.
ಅಮಿತ್ ಶಾ ಸ್ಪರ್ಧೆ ಮಾಡಿದ್ರು, ನಾಳೆ ರಾತ್ರಿ ದೆಹಲಿಗೆ ಹೋಗುವೆ. ಅವರು ಸ್ಪರ್ಧಿಸುವ ಬಗ್ಗೆ ಬೇಡ ಎಂದರೆ ಸ್ಪರ್ಧಿಸುವೆ. ಕರೆ ಬಂದ ನಂತರ ಈಶ್ವರಪ್ಪ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿ ಸೋತುಬಿಡ್ತಾರೆ ಎಂಬ ಭಯದಿಂದ ನನಗೆ ಅಮಿತ್ ಶಾ ಮೂಲಕ ಕರೆ ಮಾಡಿಸಿದ್ದಾರೆ. ಅವರಿಗೆ ಮನವರಿಕೆ ಮಾಡಿ ಬಂದು ಸ್ಪರ್ಧಿಸುವುದು ಖಚಿತ ಎಂದರು