ಕೆ ಜಿ ಎಫ್ 2 ಬಳಿಕ ಅಭಿಮಾನಿಗಳಂತೂ ಕೆ ಜಿ ಎಫ್ 3ಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅತ್ತ ಯಶ್ ಮುಂದಿನ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ರಾಕಿಂಗ್ ಸ್ಟಾರ್ ಹೊಸ ಸುಳಿವೊಂದನ್ನ ನೀಡಿದ್ದಾರೆ. ಶೀಘ್ರದಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ 19ನೇ ಸಿನಿಮಾವನ್ನು ಅನೌನ್ಸ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವಾಗಿ ಯಶ್ ಸಾಮಾಜಿಕ ಜಾಲತಾಣದಲ್ಲಿ ಸುಳಿವು ಬಿಟ್ಟು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಯ ಪ್ರೊಫೈಲ್ ಬದಲಾಯಿಸಿದ್ದಾರೆ. ಲೋಡಿಂಗ್ ಎಂಬ ಫೋಟೋ ಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ತೆರೆದಿಟ್ಟಿದ್ದಾರೆ.
ಸದ್ಯ ಯಶ್ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಆಗಾಗ ವಿದೇಶಕ್ಕೂ ಹೋಗಿ ಬರುತ್ತಿದ್ದಾರೆ ಅನ್ನೋ ಸುದ್ದಿ ಈಗಾಗಲೇ ಹರಿದಾಡುತ್ತಿದೆ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿಕೊಂಡ ಪ್ರೊಫೈಲ್ ಫೋಟೋ ಮಾತ್ರ, ಈ ತಿಂಗಳಲ್ಲೇ ಯಶ್ ಮುಂದಿನ ಸಿನಿಮಾ ಘೋಷಿಸ್ತಾರಾ ಅನ್ನೋ ಮುನ್ಸೂಚನೆ ನೀಡಿದಂತಿದೆ.