ಈ ಬಾರಿ ಅದ್ದೂರಿ ದಸರಾ ಆಚರಣೆ ಹಿನ್ನೆಲೆ: ಹೋಟೆಲ್ ಉದ್ಯಮಕ್ಕೆ ಭರ್ಜರಿ ವ್ಯಾಪಾರ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಮೈಸೂರು,ಅಕ್ಟೋಬರ್,15,2024 (www.justkannada.in):  ಈ ಬಾರಿ ಅದ್ದೂರಿಯಾಗಿ ಮೈಸೂರು  ದಸರಾ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಹರಿದು ಬಂದಿದ್ದು  ಹೀಗಾಗಿ ಹೋಟೆಲ್ ಉದ್ಯಮಕ್ಕೆ ಭರ್ಜರಿ ವ್ಯಾಪಾರವಾಗಿದೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಹೋಟೆಲ್ ಮಾಲೀಕರ ಸಂಘದ  ಅಧ್ಯಕ್ಷ ನಾರಾಯಣಗೌಡ, ಈ ಬಾರಿ ಅದ್ದೂರಿ ದಸರಾ ಆಚರಣೆ ಹಿನ್ನಲೆ, ಹೋಟೆಲ್ ಉದ್ಯಮಕ್ಕೆ ಭರ್ಜರಿ ವ್ಯಾಪಾರವಾಗಿದೆ. ಕೇವಲ ನಾಲ್ಕು ದಿನಕ್ಕೆ 100 ಕೋಟಿಗೂ ಹೆಚ್ಚು ವ್ಯಾಪಾರವಾಗಿದ್ದು,  ಮೈಸೂರಿನಲ್ಲಿರುವ ಸುಮಾರು 416 ಹೋಟೆಲ್‌ ಗಳು ದಸರಾ ಸಂದರ್ಭದಲ್ಲಿ ಸಂಪೂರ್ಣ ಭರ್ತಿಯಾಗಿದ್ದವು.  416 ಹೋಟೆಲ್ ಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ರೂಮ್ ಗಳಿವೆ. ಎಲ್ಲಾ ಹೋಟೆಲ್ ಗಳಲ್ಲೂ ಎಲ್ಲಾ ಕೊಠಡಿಗಳೂ ಭರ್ತಿಯಾಗಿದ್ದವು. ಈ ಬಾರಿ ನಿರೀಕ್ಷೆಗಿಂತ ಉತ್ತಮ ವ್ಯಾಪಾರವಾಗಿದೆ ಎಂದಿದ್ದಾರೆ.

ಈ ಬಾರಿ ದಸರಾ ಮಹೋತ್ಸವ ಬಹಳ ಅಚ್ಚುಕಟ್ಟಾಗಿ ಅದ್ದೂರಿಯಾಗಿ ಆಗಿದೆ. ಆದರೆ ದಸರಾ ಗೋಲ್ಡ್ ಕಾರ್ಡ್ ಗಳು, ಟಿಕೆಟ್ ಗಳನ್ನ ನಕಲಿ ಪ್ರಿಂಟ್ ಮಾಡಿ ಒಂದಷ್ಟು ಗೊಂದಲಗಳು ಉಂಟಾಯಿತು. ಸರ್ಕಾರ ಮುಂದಿನ ದಿನಗಳಲ್ಲಿ ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಗಮನ ವಹಿಸಬೇಕು  ಎಂದು ಸಲಹೆ ನೀಡಿದರು.

Key words: mysore dasara, business, hotel industry






Previous articleಉಪಚುನಾವಣೆ: ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್ ನಿರ್ಧಾರ- ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ


Font Awesome Icons

Leave a Reply

Your email address will not be published. Required fields are marked *