ಈ ರಾಶಿಯವರಿಗೆ ಉದ್ಯೋಗಕ್ಕೆ ಸೇರಲು ಪ್ರಶ್ನೆಗಳ ಸುರಿಮಳೆ ಕಾಣಿಸಿಕೊಳ್ಳುವುದು

ಧನು ರಾಶಿ : ತಂದೆಯ ಮೇಲೆ‌ ನಿಮಗೆ ಬೇಸರ ಉಂಟಾಗಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ಕೊಡಬಹುದು. ಆಸ್ತಿಯ ವಿಚಾರದಲ್ಲಿ ನೀವು ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಹುಡುಕುವಿರಿ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು. ದೈನಂದಿನ ಕೆಲಸದಲ್ಲಿ ಸಮಸ್ಯೆಗಳು ಉಳಿಯಬಹುದು. ಉದ್ಯೋಗಕ್ಕೆ ಸೇರಲು ಪ್ರಶ್ನೆಗಳ ಸುರಿಮಳೆ ಕಾಣಿಸಿಕೊಳ್ಳುವುದು.

ಮಕರ ರಾಶಿ : ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ನಿಮಗೆ ಆಗದು. ಯಾರಿಂದಲಾದರೂ ಔಚಿತ್ಯಪೂರ್ಣವಾದ ಮಾರ್ಗದರ್ಶನವು ನಿಮಗೆ ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋಗಬೇಕಾಗುವುದು. ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ನೂತನ ವಸ್ತುಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುವಿರಿ. ನಿಮ್ಮ ಸಹವಾಸವನ್ನು ಬಿಟ್ಟವರು ಪುನಃ ಬರಬಹುದು. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು.

ಕುಂಭ ರಾಶಿ : ನಿಮ್ಮ ಸಂಗವು ಚೆನ್ನಾಗಿದ್ದರೆ ಯಾರೂ ಏನೂ ಮಾಡಲಾರರು. ಇಂದು ನಿಮಗೆ ಆತ್ಮೀಯರ‌ ಒಡನಾಡ ಅಧಿಕವಾಗಲಿದೆ. ಸಹೋದ್ಯೋಗಿಗಳನ್ನು ಕೆಲಸದಲ್ಲಿ ಸಹಾಯಕ್ಕಾಗಿ ಕೇಳುವಿರಿ. ನಿಮ್ಮದಾದ ಚಿಂತನೆಯನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಲು ಬಯಸುವಿರಿ.‌ ಅನಿರೀಕ್ಷಿತ ಪ್ರಯಾಣವು ಬರಬಹುದು.‌

ಮೀನ ರಾಶಿ : ವ್ಯವಹಾರದಲ್ಲಿನ ಸೂಕ್ಷ್ಮ ವಿಚಾರಗಳನ್ನು ವೇಗವಾಗಿ ಅರಿತುಕೊಳ್ಳಬೇಕು. ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಆಲಸ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು. ಕೃಷಿಯಲ್ಲಿ ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಮನಸ್ಸನ್ನು ಇಟ್ಟುಕೊಳ್ಳುವಿರಿ. ನೀವು ಇಂದು ಅತಿಥಿಯಾಗಿ ಕಾರ್ಯದಲ್ಲಿ ಭಾಗವಹಿಸುವಿರಿ. ಮನೆಯವರನ್ನು ನಿಷ್ಠುರ ಮಾಡಿಕೊಳ್ಳುವುದು ಬೇಡ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವಿರಿ.

Font Awesome Icons

Leave a Reply

Your email address will not be published. Required fields are marked *