ಉಡುಪಿ: ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ಬಾಲ ಪ್ರತಿಭೆ ವಂಶಿಕಾ ಉಡುಪಿ ಕೃಷ್ಣ ಭಕ್ತರ ಮನಗೆದ್ದಿದ್ದಾಳೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆದ ಭಕ್ತಜನಗಳ ಬಾಯಲ್ಲಿ ರಾಮನಾಮ ಹೇಳಿಸಿದ್ದಾಳೆ.
ಮಠದ ಚಂದ್ರ ಶಾಲೆಯಲ್ಲಿ ರಾತ್ರಿ ಪೂಜೆಯ ವೇಳೆ, ನಡೆಯುವ ಅಷ್ಠಾವಧಾನ ಸೇವೆಯಲ್ಲಿ ಈ ಪುಟ್ಟ ಬಾಲಕಿ ಭಕ್ತಿ ಸಂಗೀತದ ಮೂಲಕ ನೆರೆದಿದ್ದ ಭಕ್ತರು ಹಾಗೂ ಪರ್ಯಾಯ ಮಠಾಧೀಶರ ಪ್ರೀತಿಗೆ ಪಾತ್ರಳಾಗಿದ್ದಾಳೆ. ನಟ, ನಿರೂಪಕ ಆನಂದ್ ಮಗಳು ವಂಶಿಕಾ ಹಾಡಿರುವ ಹಾಡು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.