ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮೊದಲ ಮಂಗನಕಾಯಿಲೆ ಪತ್ತೆಯಾಗಿದೆ. ಸಿದ್ದಾಪುರದ ನಿಪ್ಲಿಯ 40 ವರ್ಷದ ವ್ಯಕ್ತಿಯೋರ್ವನಿಗೆ ಕೆಎಫ್ಡಿ ಇರುವುದು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಈ ವ್ಯಕ್ತಿ ಮೊದಲು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೆಎಫ್ಡಿ ಪಾಸಿಟಿವ್ ದೃಢವಾಗುತ್ತಿದ್ದಂತೆ ವ್ಯಕ್ತಿಯನ್ನ ಇದೀಗ ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗನ ಕಾಯಿಲೆ ಸೋಂಕಿಗೆ ಶಿವಮೊಗ್ಗದ ಹೊಸನಗರ ತಾಲೂಕಿನ ಗ್ರಾಮದ 18 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ್ದರು. ಇದು 2024ರ ಅವಧಿಯಲ್ಲಿ ಜಿಲ್ಲೆಯಲ್ಲಿ ಕೆಎಫ್ಡಿ ಸೋಂಕಿಗೆ ಬಲಿಯಾದ ಮೊದಲ ಪ್ರಕರಣ ಆಗಿತ್ತು.