ಮುಂಬೈ: ಅನಿಮಲ್ ಚಿತ್ರ ಕಲೆಕ್ಷನ್ ವಿಚಾರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಮೂರೇ ದಿನದಲ್ಲಿ 230 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದೇ ರೀತಿ ಹಸಿ ಬಿಸಿ ದೃಶ್ಯಗಳಿಂದಲೂ ಚಿತ್ರ ಗಲ್ಲಿ ಗಾಸಿಪ್ ಆಗಿದೆ. ಅಡಲ್ಟ್ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಇದಾಗಲೇ ಕತ್ತರಿ ಹಾಕಿದೆ.
ಕತ್ತರಿ ಹಾಕಿದ ಮೇಲಷ್ಟೇ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೂ ಮೊದಲು ರಿಲೀಸ್ ಆಗಿದ್ದ ಹಾಡೊಂದು ಹಲ್ಚಲ್ ಸೃಷ್ಟಿಸಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಲಿಪ್ಲಾಕ್ ಸೀನ್ ನೋಡಿ ಫ್ಯಾನ್ಸ್ ಉಫ್ ಎಂದಿದ್ದರು. ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್ರೂಮ್ ಸೀನ್ ಲೀಕ್ ಆಗಿರುವ ಬೆನ್ನಲ್ಲೇ, ರಣಬೀರ್ ಜೊತೆ ಇನ್ನೋರ್ವ ನಟಿ ಸಂಪೂರ್ಣವಾಗಿ ಬೆತ್ತಲಾಗಿದ್ದ ವಿಡಿಯೋ ವೈರಲ್ ಆಗಿದೆ. ಇವರಿಬ್ಬರ ಲಿಪ್ಲಾಕ್ ಸೀನ್ ಹಾಗೂ ಬೆಡ್ ಮೇಲಿನ ದೃಶ್ಯಗಳು ವೈರಲ್ ಆಗಿವೆ. ಅಷ್ಟಕ್ಕೂ ಈ ನಟಿಯ ಹೆಸರು ತೃಪ್ತಿ ಡಿಮ್ರಿ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್ ಕಪೂರ್ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು.
Tripti Dimri and Ranbir Kapoor much talked scene from #AnimalMovie #AnimalMovieReview 🔥🔥 pic.twitter.com/CKRcnoE6gQ
— Zoya Khan (@SweetZzoya) December 1, 2023