ಉರ್ಫಿ ಅರೆಸ್ಟ್‌ ಆಗಿದ್ದೇ ಸುಳ್ಳು: ನಕಲಿ ವಿಡಿಯೋ ಮಾಡಿದ ಜಾವೇದ್‌ ಟೀಂನ ನಾಲ್ವರು ಅಂದರ್‌

ಮುಂಬೈ: ನಟಿ ಉರ್ಫಿಜಾವೇದ್‌ ಹೋದಲ್ಲಿ ರಂಪ ಮಾಡುವುದನ್ನೇ ಕಾಯಕ ಮಾಡಿಕೊಂಡಂತಿದೆ. ಅವಳ ತುಂಡುಡಿಗೆ, ಮಾದಕ ನಡಿಗೆ, ಮೈಮಾಟ ಹುಡುಗರನ್ನು ಮಾತ್ರವಲ್ಲ ಮಹಿಳೆಯರನ್ನು ಕೆರಳಿಸುವಂತಿರುತ್ತದೆ. ಇಂತಹ ಉರ್ಫಿ ತುಂಡುಡುಗೆ ಧರಿಸುವುದರಲ್ಲೇ ಫೇಮಸ್‌. ಈ ಹಿಂದೆ ಹಲವಾರು ಬಾರಿ ಆಕೆ ಇದೇ ವಿಚಾರಕ್ಕೆ ಪೊಲೀಸರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿತ್ತು.

ನಿನ್ನೆ ಮತ್ತೊಮ್ಮೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಂಧನ ನಡೆಸಿದ ಪೊಲೀಸರೇ ನಕಲಿ ಎಂಬ ವಿಚಾರ ಈಗ ಬಯಲಿಗೆ ಬಂದಿದೆ.

ಏನಾಗಿತ್ತು: ಉರ್ಫಿ ಜಾವೇದ್ ಅವರನ್ನು ಬಂಧಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ತುಂಡುಡುಗೆ ಧರಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಅನೇಕರು ಮುಂಬೈ ಪೊಲೀಸರ ವಿರುದ್ಧ ಅಪಸ್ವರ ತೆಗೆದಿದ್ದರು. ಇನ್ನೂ ಕೆಲವರು ಇದು ಉರ್ಫಿ ಆಡಿದ ನಾಟಕ ಎನ್ನಲಾಗಿತ್ತು. ಈ ಪ್ರಕರಣದ ಅಸಲಿಯತ್ತು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಓಶಿವಾರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉರ್ಫಿ ಜಾವೇದ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ವಿಡಿಯೋ ಮಾಡಿ ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಿದ್ದಕ್ಕಾಗಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸಿದ ಓಶಿವಾರ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *