ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ನಾಯಕ ನಟಿ ಅಮಲಾ ಪೌಲ್ ಇದೀಗ ಎರಡನೇ ಮದುವೆಗೆ ರೆಡಿ ಆಗಿದ್ದಾರೆ. ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಡಿಯೋನ ಜಗತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
ತಮಿಳು ನಿರ್ದೇಶಕ ಎ.ಎಲ್. ವಿಜಯ್ ಜೊತೆ ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು. ಈಗ ಅಮಲಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಜಗತ್ ದೇಸಾಯಿ ಜೊತೆ ಈಗ ಅವರು ಮದುವೆ ಆಗುತ್ತಿದ್ದಾರೆ.
ಈ ಜೋಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಂಗೇಜ್ಮೆಂಟ್ ಸೆಲೆಬ್ರೇಷನ್ ಅದ್ದೂರಿಯಾಗಿತ್ತು. ಮಂಡಿ ಊರಿ ಅಮಲಾಗೆ ಜಗತ್ ಪ್ರಪೋಸ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಜಗತ್ ಅವರು ‘ನನ್ನ ಕ್ವೀನ್ ಯೆಸ್ ಎಂದಳು. ಹ್ಯಾಪಿ ಬರ್ತ್ಡೇ ಲವ್’ ಎಂದು ಬರೆದುಕೊಂಡಿದ್ದಾರೆ.