ಎ.ಎಮ್. ಹಿಂಡಸಗೇರಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹುಬ್ಬಳ್ಳಿ : ಬಹಳ‌ ದುರ್ದೈವದ ಸಂಗತಿ ಹುಬ್ಬಳ್ಳಿಯಲ್ಲಿ ಇಂತಹ ಘಟನೆ ನಡೆದಿರುವುದು, ನಾವು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ಶೀಘ್ರ ತನಿಖೆ ಆಗಬೇಕು, ಹೀನ ಕೆಲಸ ಮಾಡಿದ ಹುಡುಗನಿಗೆ ಶಿಕ್ಷೆ ಆಗಬೇಕು. ನೇಹಾ ನಮ್ಮ ಮಗಳು ಎಂದು ಭಾವಿಸಿದ್ದೇವೆ. ನಿರಂಜನ ಮತ್ತು ನಾವು ಬಹಳ ವರ್ಷದಿಂದ ಸಂಪರ್ಕದಲ್ಲಿ ಇದ್ದೇವೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ‌ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಮ್. ಹಿಂಡಸಗೇರಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ‌ ಹಿಂದೆ ಯಾರಾದರೂ ಇದ್ದರೆ ಪತ್ತೆ ಹಚ್ಚಬೇಕು. ಫಾಸ್ಟ್‌ಟ್ರ್ಯಾಕ್ ಕೋರ್ಟ್ ಮಾಡಿ ಕೇಸ್ ಕೊಡಬೇಕು. 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು. ಯಾವ ವಕೀಲರು ಸಹ ವಕಾಲತ್ತು ವಹಿಸಿಬಾರದೆಂದು ನಾವು ಮನವಿ ಮಾಡಿದ್ದೇವೆ.‌

ಇಂತಹ ಹೀನ ಕೆಲಸ ಮಾಡು ಎಂದು ಯಾವ ಧರ್ಮದಲ್ಲಿ ಹೇಳುವುದಿಲ್ಲ.ಯಾರು ನೋಡದಂತಹ ಶಿಕ್ಷೆಯನ್ನ ದೇವರು ಕೊಡಲಿ ಪ್ರಾರ್ಥನೆ ಮಾಡುತೇವೆ. ಪೊಲೀಸರು ನಡಸಿದ ಶಾಂತಿ ಸಭೆಯಲ್ಲಿ ಮಕ್ಕಳಿಗೆ ಜಾಗೃತಿ ಬಗ್ಗೆ ಮಾತನಾಡಲಾಗಿದೆ.ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಿದೆ.ಯಾರೋ ಇರಲಿ, ಕೊಲೆ ಮಾಡಲು ಯಾರೋ ತೋರಿಸರಬಹುದು ಎಂದರು.

ಮತ್ತೇ ಮುಂದುವರೆದ ಮಾತನಾಡಿದ ಅವರು, ಪೊಲೀಸರು ಪ್ರಾಮಾಣಿಕ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ. ಫಯಾಜ್‌ನ ತಂದೆ-ತಾಯಿ ಕೊಲೆಗೆ ಕೈ ಜೋಡಿಸಿದ್ದರೆ, ಅವರಿಗೂ ಶಿಕ್ಷೆ ನೀಡಲಿ. ಇಂತಹ ಕೆಲಸ ಯಾರೂ ಮಾಡಬೇಡಿ, ನಿಮ್ಮ ಭವಿಷ್ಯಕ್ಕಾಗಿ ಚೆನ್ನಾಗಿ ಓದಿ ಎಂದು ಎಲ್ಲಾ ಧರ್ಮದ ಮಕ್ಕಳಿಗೆ ನಾನು ಹೇಳುತ್ತೇನೆ ಎಂದರು.

Font Awesome Icons

Leave a Reply

Your email address will not be published. Required fields are marked *