ಎ ಕೆ ಸಮೂಹ ಸಂಸ್ಥೆಗಳ ಸ್ಥಾಪಕ ಎ ಕೆ ಅಹ್ಮದ್ ನಿಧನ

ಮಂಗಳೂರು  : ಪ್ರತಿಷ್ಠಿತ ಎ ಕೆ ಸಮೂಹ ಸಂಸ್ಥೆಗಳ ಸ್ಥಾಪಕ ಎ ಕೆ ಅಹ್ಮದ್ ಅವರು ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಹೈಲ್ಯಾಂಡ್ ನ ಇಹ್ಸಾನ್ ಮಸೀದಿಯ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಸಾಮಾಜಿಕ, ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಸರಳ ಸಜ್ಜನ ವ್ಯಕ್ತಿತ್ವದ ಪರೋಪಕಾರಿ ಮನೋಭಾವದವರಾಗಿದ್ದರು. ಎ ಕೆ ಗ್ರೂಪ್ ಅನ್ನು ಪ್ರಾರಂಭಿಸಿ ಯಶಸ್ಸಿನ ಉತ್ತುಂಗಕ್ಕೆ ಒಯ್ದು ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರು ಪತ್ನಿ,ನಾಲ್ಕು ಗಂಡು ಮಕ್ಕಳು ಹಾಗು ಮೂರು ಹೆಣ್ಣು ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Font Awesome Icons

Leave a Reply

Your email address will not be published. Required fields are marked *