ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ಸಾವು: ತನಿಖೆಗೆ ಆದೇಶ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ತುಮಕೂರು,ನವೆಂಬರ್,5,2024 (www.justkannada.in): ಏಕಲವ್ಯ ವಸತಿ ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂಯ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಅಭಿಷೇಕ್ ನಿಗೂಢವಾಗಿ ಸಾವನ್ನ‍ಪ್ಪಿದ ವಿದ್ಯಾರ್ಥಿ.  ಅಭಿಷೇಕ್ ವಸತಿ ಶಾಲೆಯ ಕೊಠಡಿಯಲ್ಲಿ ನರಳಾಡಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವಸತಿ ಶಾಲೆಯ ಕೊಠಡಿಯಲ್ಲಿ ರಕ್ತಕಾರಿಕೊಂಡ ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆಯೇ ನೀಡಿಲ್ಲ. ಪ್ರಾಂಶುಪಾಲರು ಮತ್ತು ವಾರ್ಡನ್ 3 ದಿನದ ರಜೆಯೇ ವಿದ್ಯಾರ್ಥಿ ಸಾವಿಗೆ ಕಾರಣ ಎಂದು ಏಕಲವ್ಯ  ವಸತಿಶಾಲೆಯ ಸಿಬ್ಬಂದಿಗಳ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಏಕಲವ್ಯ ವಸತಿ ಶಾಲೆಗೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿ ಸಾವಿನ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ  ಪ್ರಾಂಶುಪಾಲ ವಿನೋದ್ ಮತ್ತು ವಾರ್ಡನ್ ಮಂಜುನಾಥ ಅಮಾನತಿಗೆ ಸೂಚನೆ ನೀಡಿದ್ದಾರೆ. ವಸತಿ ಶಾಲೆಗೆ ಆರೋಗ್ಯ, ಪೊಲೀಸ್ ಮತ್ತು ವಿಧಿವಿಜ್ಞಾನ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಇನ್ನು ಪ್ರಾಂಶುಪಾಲ ಮತ್ತು ವಾರ್ಡನ್ ವಿರುದ್ದ ಕೊರಟಗೆರೆ ಪೊಲೀಸರಿಗೆ ಮೃತ ವಿದ್ಯಾರ್ಥಿ ಅಭಿಷೇಕ್ ಪೋಷಕರು ದೂರು ನೀಡಿದ್ದು, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Key words: Eklavya Residential School, Student, Death, tumakur

Font Awesome Icons

Leave a Reply

Your email address will not be published. Required fields are marked *