ಐದು ದಶಕಗಳ ರಂಗ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು : ಜನ್ನಿ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಅ.30,2024: (www.justkannada.in news) ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಸಂತಸದ ತಂದಿದೆ. ಅದರಲ್ಲೂ ಸಂವಿಧಾನ, ಜಾತ್ಯಾತೀತತೆ ಹಾಗೂ ಸಮಸಮಾಜದ ಬಗ್ಗೆ ಒಲವಿರುವ ಸರಕಾರ ನನ್ನನ್ನು ಪ್ರಶಸ್ತಿ ಆಯ್ಕೆ ಮಾಡಿರುವುದು ಖುಷಿಯಾಗಿದೆ. ಇದು ಸಮಸ್ತ ರಂಗಭೂಮಿಯ ಕ್ರಿಯಾಶೀಲರಿಗೆ ಸಂದ ಗೌರವ ಎಂದು ಜನಾರ್ಧನ್‌ ಅಭಿಪ್ರಾಯಪಟ್ಟರು.

ಹೆಸರಾಂತ ರಂಗಭೂಮಿ ಕಲಾವಿದ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್‌ (ಜನ್ನಿ) ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ “ಜಸ್ಟ್‌ ಕನ್ನಡ” ಜತೆ ಮಾತನಾಡಿ ಸಂಸತ ವ್ಯಕ್ತಪಡಿಸಿದ್ದು ಹೀಗೆ.

ಯಾವುದೇ ಕ್ಷೇತ್ರವಿರಲಿ ಸುದೀರ್ಘವಾಗಿ ಪ್ರಾಮಾಣಿಕತೆ, ಬದ್ಧತೆ ಹಾಗೂ ಸೃಜನಶೀಲತೆಯಿಂದ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಒಳ್ಳೆಯ ಸಂಸ್ಕೃತಿ.  ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ನಾನು ಬಾಜನವಾಗಿರುವುದಕ್ಕೆ ಸಂತಸವಾಗಿದೆ.

ಈ ಪ್ರಶಸ್ತಿ  ನನ್ನ ಗುರುಗಳಾದ ಬಿ.ವಿ ಕಾರಂತರು ಮತ್ತು ಡಾ.ಸಿದ್ದಲಿಂಗಯ್ಯ ಅವರಿಗೆ ಅರ್ಪಿಸುತ್ತೇನೆ. ನಾನು ಪ್ರಶಸ್ತಿಗಾಗಿ ಎಂದೂ ನಿರೀಕ್ಷೆ ಮಾಡಿದವನಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರಮಾಣಿಕ ಸೇವೆ ಮಾಡಿಕೊಂಡು ಬಂದರೆ ಪ್ರಶಸ್ತಿಗಳು ತಾವಾಗಿಯೇ ಹರಸಿ ಬರುತ್ತವೆ. ಈ ಸಂದರ್ಭದಲ್ಲಿ ನಾನು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನ ತಿಳಿಸುತ್ತೇನೆ.

ಪ್ರಶಸ್ತಿ ತಡವಾಯಿತು ಅಂತ ಏನೂ ಅನ್ನಿಸುತ್ತಿಲ್ಲ. ನನಗಿಂತ ಅನೇಕ ಹಿರಿಯ ಸಾಧಕರು ಇದ್ದಾರೆ. ಆದಾಗ್ಯೂ ನನ್ನ ಐದು ದಶಕಗಳ ರಂಗ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರಕಾರಕ್ಕೆ ಧನ್ಯವಾದಗಳು.

key words: theatre artiste, former Director of Mysuru Rangayana, Janardhan (Janni), Kannada Rajyotsava Award

SUMMARY:

Noted theatre artiste and former Director of Mysuru Rangayana, Janardhan (Janni), has been conferred with this year’s Kannada Rajyotsava Award

Font Awesome Icons

Leave a Reply

Your email address will not be published. Required fields are marked *