ದೆಹಲಿ: ತಾತನ ಮಡಿಲಲ್ಲಿದ್ದ ಒಂದೂವರೆ ವರ್ಷದ ಹೆಣ್ಣು ಮಗುವಿಗೆ ಪಿಟ್ ಬುಲ್ ನಾಯಿ ಕಚ್ಚಿದ ಘಟನೆ ಬುರಾರಿಯಲ್ಲಿ ನಡೆದಿದೆ.
ಒಂದೂವರೆ ವರ್ಷದ ಮಗುವಿನ ಕಾಲಿನ ಹಲವು ಭಾಗಗಳಲ್ಲಿ ಹೊಲಿಗೆ ಹಾಕಲಾಗಿದ್ದು, ಮೂರು ಫ್ರಾಕ್ಚರ್ ಆಗಿದೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಪಿಟ್ ಬುಲ್ ಮಗುವಿನ ಮೇಲೆ ದಾಳಿ ನಡೆಸುತ್ತಿರುವುದು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಈ ದೃಶ್ಯಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ನಾಯಿಯ ಮಾಲೀಕರು ಮತ್ತು ಆರೇಳು ವ್ಯಕ್ತಿಗಳು ಪಿಟ್ ಬುಲ್ ಅನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ. ಮಗುವನ್ನು ಎಳೆಯಲು ಸುಮಾರು ಒಂದು ನಿಮಿಷ ಬೇಕಾಯಿತು.
ಜನವರಿ 2 ರಂದು ದೆಹಲಿಯ ಬುರಾರಿಯಿಂದ ಈ ಘಟನೆ ವರದಿಯಾಗಿದೆ. ಬಾಲಕಿ 17 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಳು, ಅಲ್ಲಿ ವೈದ್ಯರು 18 ಹೊಲಿಗೆಗಳನ್ನು ಹಾಕಿದ್ದಾರೆ.
ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.