ಒಟಿಟಿಗೆ ಎಂಟ್ರಿ ಕೊಟ್ಟ ʻಸಪ್ತ ಸಾಗರದಾಚೆ ಎಲ್ಲೋʼ: ಸೈಡ್‌ ʻಬಿʼ ರಿಲೀಸ್‌ ಡೇಟ್‌ ಫಿಕ್ಸ್

ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿದೆ. ಪ್ರೇಕ್ಷಕರು ಭಾಗ 2ಕ್ಕೆ ಕಾಯುತ್ತಿದ್ದಾರೆ. ಇದೀಗ ಸದ್ದಿಲ್ಲದೇ ಮಧ್ಯರಾತ್ರಿ ಸೈಡ್- A ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಷ್ಟೇ ಅಲ್ಲದೇ ಭಾಗ 2ರ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಿದ್ದಾರೆ.

ಈ ಮೊದಲು ಸೈಡ್‌ ಬಿ ಅ.20ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಆದರೀಗ ಸೈಡ್‌ ಬಿ ರಿಲೀಸ್ ಒಂದು ವಾರ ತಡವಾಗಿ ರಿಲೀಸ್‌ ಆಗುತ್ತಿದೆ. ತೆಲುಗಿನಲ್ಲಿ ಇತ್ತೀಚೆಗೆ ಸಿನಿಮಾ ‘ಸಪ್ತಸಾಗರಾಲು ದಾಟಿ’ ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಅದರ 2ನೇ ಭಾಗ ಅಕ್ಟೋಬರ್ 27ಕ್ಕೆ ತೆರೆಗೆ ತರಲು ಪ್ಲ್ಯಾನ್ ಆಗಿತ್ತು. ಹಾಗಾಗಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್- B ಥ್ರಿಯೇಟ್ರಿಕಲ್ ರಿಲೀಸ್ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ.

ಭಾಗ -1 ನೋಡದೇ ಇರುವವರು ಒಟಿಟಿಯಲ್ಲಿ ನೋಡಬಹುದು. ಮಧ್ಯರಾತ್ರಿಯಿಂದಲೇ ಅಮೆಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

Font Awesome Icons

Leave a Reply

Your email address will not be published. Required fields are marked *