ಒಟಿಟಿಯಲ್ಲಿ ವಿಜಯ್ ನಟನೆಯ ʼಲಿಯೋ ಬಿಡುಗಡೆಗೆ ಯಾವಾಗ!

ದಳಪತಿ ವಿಜಯ್ ನಟನೆಯ ‘ಲಿಯೋ: ಬ್ಲಡಿ ಸ್ವೀಟ್’ ಗಲ್ಲಾಪೆಟ್ಟಿಗೆಯನ್ನು ಯಶಸ್ಸು ಕಂಡಿದೆ. ಚಿತ್ರ ಬಿಡುಗಡೆಯಾದ ಒಂದು ವಾರದೊಳಗೆ ಹಲವಾರು ದಾಖಲೆಗಳನ್ನು ಮುರಿದಿದೆ ಮತ್ತು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರವು ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿದ್ದರೂ ಸಹ, ‘ಲಿಯೋ’ ನ ಒಟಿಟಿ ಬಿಡುಗಡೆ ಬಗ್ಗೆ ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ವರದಿಗಳ ಪ್ರಕಾರ, ‘ಲಿಯೋ’ ನವೆಂಬರ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ‘ಲಿಯೋ’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ವಿಶ್ವದಾದ್ಯಂತ 400 ಕೋಟಿ ರೂ. ಸಂಗ್ರಹಿಸಿದೆ.

Font Awesome Icons

Leave a Reply

Your email address will not be published. Required fields are marked *