ಔರದ: ನಮ್ಮ ಸರ್ಕಾರ ಕೊಟ್ಟಿರುವ ಎಲ್ಲಾ ಐದು ಗ್ಯಾರಂಟಿಗಳನ್ನು 9 ತಿಂಗಳಲ್ಲಿ ಅನುಷ್ಠಾನಕ್ಕೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅವರು ಇಂದು ಔರಾದ ಪಟ್ಟಣದಲ್ಲಿ ನಡೆದ ಜನ ಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿ, ಸಾಮಾನ್ಯ ಜನರ ಹೊರೆ ಕಡಿಮೆ ಮಾಡಲು ನಮ್ಮ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಯಾರಿಗೂ ಭೇದ ಭಾವ ಮಾಡದೆ ಎಲ್ಲಾ ಕಾರ್ಡ್ ದಾರರಿಗೆ ಗೃಹ ಲಕ್ಷ್ಮಿ ಯೋಜನೆ ನೀಡಿದ್ದೇವೆ. ಅನ್ನಭಾಗ್ಯ ವರ್ಷಕ್ಕೆ 7000 ಕೋಟಿ ರೂ ನೀಡುತ್ತಿದ್ದೇವೆ ಎಂದರು.
ಬೀದರ್ ಜಿಲ್ಲೆಯಲ್ಲೆ ಪ್ರತಿದಿನ 7 ಲಕ್ಷ ಮಹಿಳೆಯರು ಫ್ರೀ ಯಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂದು ಉಚಿತ ಶಕ್ತಿ ಯೋಜನೆ ಬಗ್ಗೆ ಸಚಿವರು ಮಾಹಿತಿ ನೀಡಿದರು.
ಜಿಲ್ಲೆಯ ಎಂಟು ತಾಲೂಕು ಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತದೆ. ನೀವು ನೀಡಿರುವ ಅರ್ಜಿ ಗಳನ್ನು ಸ್ಥಳದಲ್ಲಿಯೇ ನಮ್ಮ ಸರ್ಕಾರದ ಅಧಿಕಾರಿಗಳು ವಿಲೇವಾರಿ ಮಾಡಲಿದ್ದಾರೆ. ಸ್ಥಳದಲ್ಲಿ ವಿಲೇವಾರಿಯಾಗದ ಅರ್ಜಿಗಳು ವಾರದಲ್ಲಿ ಪರಿಹಾರ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಸೇರಿದಂತೆ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.