ಔರಾದ ಪಾಲಿಟೆಕ್ನಿಕ್‌ನಲ್ಲಿ ಸಿಪಿ ಕೋರ್ಸ್ ಗೆ ಅನುಮತಿ: ಶಾಸಕ ಪ್ರಭು ಚವ್ಹಾಣ

ಬೀದರ್: ಔರಾದ(ಬಿ) ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಮರ್ಷಿಯಲ್ ಪ್ರಾಕ್ಟಿಸ್ (ಸಿ.ಪಿ.) ವಿಭಾಗ ತೆರೆಯಲು ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.

ಔರಾದ(ಬಿ) ಪಾಲಿಟೆಕ್ನಿಕ್‌ನಲ್ಲಿ ಈಗಾಗಲೇ ಸಿವಿಲ್ ಇಂಜಿನಿಯರಿಂಗ್, ಅಟೋಮೇಶನ್ & ರೋಬೋಟಿಕ್ಸ್, ಅಲ್ಟರ್ನೆಟಿವ್ ಎನರ್ಜಿ ಟೆಕ್ನಾಲಜಿ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ಗಳಿವೆ. ಆದರೆ ಕಮರ್ಷಿಯಲ್ ಪ್ರ‍್ಯಾಕ್ಟಿಸ್ ಕೋರ್ಸ ಸಹ ಬೇಕೆಂದು ಅನೇಕ ವಿದ್ಯಾರ್ಥಿಗಳ ಬೇಡಿಕೆ ಇತ್ತು. ಈ ಕೋರ್ಸಿಗಾಗಿ ವಿದ್ಯಾರ್ಥಿಗಳು ಬೀದರ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು.

ನಮ್ಮ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ನಮ್ಮ ತಾಲ್ಲೂಕಿನಲ್ಲಿಯೇ ಸಿಪಿ ಕೋರ್ಸ್ ಆರಂಭಿಸಬೇಕೆಂದು ಹಿಂದೆ ಸಚಿವನಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಯವರಿಗೆ ಮತ್ತು ಇಲಾಖೆಗೆ ಪತ್ರ ಬರೆದಿದ್ದೆ. ನಂತರವೂ ಇಲಾಖೆಯ ಮೇಲೆ ನಿರಂತರ ಒತ್ತಡ ಹಾಕುತ್ತಲೇ ಬಂದಿದ್ದೆ.

ನನ್ನ ನಿರಂತರ ಪ್ರಯತ್ನದಿಂದ ಹೊಸ ಕೋಸ್ ತೆರೆಯಲು ಅನುಮತಿ ಸಿಕ್ಕಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಕೋರ್ಸ್ ಆರಂಭವಾಗಲಿದ್ದು, 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಕಮರ್ಷಿಯಲ್ ಪ್ರ‍್ಯಾಕ್ಟೀಸ್ ವಿಭಾಗಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮಾತ್ರ ಈ ಕೋರ್ಸು ಇರುವುದರಿಂದ 371( ಜೆ) ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೂ ಈಗ ಉದ್ಯೋಗವಕಾಶಗಳ ಬಾಗಿಲು ತೆರೆಯಲಿವೆ. ಈ ಕೋರ್ಸ್ ಪೂರ್ಣಗೊಳಿಸಿದವರು ಬಹುಬೇಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೀಘ್ರಲಿಪಿಗಾರರಾಗಿ, ದತ್ತಾಂಶ ನಮೂದು ಸಹಾಯಕರಾಗಿ ಹಾಗೂ ಖಾಸಗಿ ವಲಯದಲ್ಲಿ ವಿವಿಧ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

ಗಡಿ ಭಾಗದಲ್ಲಿರುವ ಔರಾದ(ಬಿ) ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಗಳನ್ನು ವಹಿಸಲಾಗುತ್ತಿದೆ. ಔರಾದ(ಬಿ) ಸರ್ಕಾರಿ ಪಾಲಿಟೆಕ್ನಿಕ್‌ಗೆ ಉತ್ತಮ ಕಟ್ಟಡವನ್ನು ನಿರ್ಮಿಸಿಕೊಟ್ಟು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ.

ಕೆಲವು ದಿನಗಳಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಯವರು ಮತ್ತು ಸಂಬAಧಿಸಿದ ಸಚಿವರ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಕೊರತೆಯಿರುವ ಸಿಬ್ಬಂದಿಯನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *