ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯೊಬ್ಬರು ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಕಚೇರಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಮಹೇಶ್ (45) ಆತ್ಮಹತ್ಯೆಗೆ ಶರಣಾದ ಬಿಎಂಟಿಸಿ ಸಿಬ್ಬಂದಿ. ನಿನ್ನೆ ಬೆಳಿಗ್ಗೆ ಸೆಕ್ಯೂರಿಟಿ ಗಾರ್ಡ್ ಬಳಿ ರೆಕಾರ್ಡ್ ರೂಮ್ ಬೀಗ ಕೇಳಿ ಪಡೆದಿದ್ದ ಮಹೇಶ್, ನಿನ್ನೆ ಬೆಳಿಗ್ಗೆಯಿಂದಲೂ ರೆಕಾರ್ಡ್ ರೂಮ್ ನಲ್ಲಿಯೇ ಓಡಾಡುತ್ತಿದ್ದರು.