ಬಿಹಾರ: ಬಿಹಾರದ ಕತಿಹಾರ್ನಲ್ಲಿ ಬಸ್ವೊಂದು ಪಲ್ಟಿಯಾಗಿದ್ದು ಇಬ್ಬರು ಮಹಿಳಾ ಪ್ರಯಾಣಿಕರು ಮೃತಪಟ್ಟು, ಸುಮಾರು 48ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಂಚಿಯಿಂದ ಸಿಲಿಗುರಿಗೆ ತೆರಳುತ್ತಿದ್ದ ಶಿವಂ ಡಿಲಕ್ಸ್ ಹೆಸರಿನ ಬಸ್ ಕಬೀರ್ ಮಠದ ಬಳಿ ರಸ್ತೆ ಬದಿಯ ಗುಂಡಿಗೆ ಪಲ್ಟಿಯಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಪಘಾತಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ, ಆದರೆ ಸಿಲಿಗುರಿಗೆ ಹೋಗುತ್ತಿದ್ದ ಪ್ರಯಾಣಿಕರ ಪ್ರಕಾರ ಚಾಲಕ ನಿದ್ರೆಗೆ ಜಾರಿದ್ದ ಎಂದಿದ್ದಾರೆ.
ಅಪಘಾತದ ಬಳಿಕ ಅನೇಕರು ಬಸ್ನಲ್ಲಿ ಸಿಲುಕಿದ್ದಾರೆ, ಪೊಲೀಸರು ಅವರನ್ನು ಹೊರತೆಗೆಯಲು ಪ್ರಯತ್ನಿಸಿದರು ಬಳಿಕ ಕ್ರೇನ್ ಸಹಾಯದಿಂದ ರಕ್ಷಿಸಿದ್ದಾರೆ.