ಕನ್ನಡ ಬರಲ್ಲ ಎಂದ ಕ್ಯಾಶಿಯರ್‌ ಮೇಲೆ ಕುಡುಕನಿಂದ ಹಲ್ಲೆ

ಬೆಂಗಳೂರು: ಕನ್ನಡ ಬರಲ್ಲ ಎಂದ ಕ್ಯಾಶಿಯರ್‌ ಮೇಲೆ ಕುಡುಕನೊಬ್ಬ ಹಲ್ಲೆ ಮಾಡಿದ ಘಟನೆ ವಿಜಯನಗರದ ಹಂಪಿನಗರದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ 3:30ಕ್ಕೆ ಈ ಘಟನೆ ನಡೆದಿದ್ದು, ಕುಡುಕ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂಗಡಿಗೆ ಬರುವ ಮೊದಲೇ ಕಂಠಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿ ವಸ್ತು ಖರೀದಿಸಿದ ಬಳಿಕ ಹಣ ಪಾವತಿಸಿರಲಿಲ್ಲ. ಹೀಗಾಗಿ ಹಣ ಪಾವತಿಸುವಂತೆ ಕ್ಯಾಶಿಯರ್‌ ಹೇಳಿದಾಗ ಕನ್ನಡದಲ್ಲಿ ಮಾತನಾಡು ಎಂದು ಗದರಿದ್ದಾನೆ.

ಈ ವೇಳೆ ಕ್ಯಾಶಿಯರ್ ಕನ್ನಡ ಬರುವುದಿಲ್ಲ ಎಂದಿದ್ದಕ್ಕೆ ಅತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಕನ್ನಡ ಬಾರದೇ ಇದ್ದರೆ ಕಲಿ ಎಂದು ಅವಾಜ್ ಹಾಕಿದ್ದಾನೆ.

Font Awesome Icons

Leave a Reply

Your email address will not be published. Required fields are marked *