ಉಡುಪಿ: ಜಿಲ್ಲೆಯ ಈದು ಗ್ರಾಮದಲ್ಲಿ ಕರೆಂಟ್ ಶಾಕ್ ಹೊಡೆದು ಓರ್ವ ಮೆಸ್ಕಾಂ ಸಿಬ್ಬಂದಿ ಮೃತ ಸಾವನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಬಾಗಲಕೋಟೆ ಮೂಲದ 28ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಹೊಸ್ಮಾರುನ ನೂರಾಳ್ಬೆಟ್ಟು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲವೆಂದು ಸ್ಥಳೀಯರು ಮೆಸ್ಕಾಂ ಕಚೇರಿಗೆ ಕರೆ ಮಾಡಿ ದೂರು ನೀಡಿದ್ರು. ಬಳಿಕ ದುರಸ್ತಿಗೆಂದು ಸ್ಥಳಕ್ಕೆ ತೆರಳಿದ ಶ್ರೀನಿವಾಸ್ ಟ್ರಾನ್ಸ್ಫಾರ್ಮರ್ನಲ್ಲಿ ದೋಷ ಹುಡುಕುತಿದ್ದಾಗ ವಿದ್ಯುತ್ ಶಾಕ್ ಹೊಡೆದಿದೆ.