ಬೆಂಗಳೂರು: ರಾಜ್ಯದ ಯುವ ಫುಟ್ಬಾಲ್ ಆಟಗಾರ ಮೋನಿಷ್ ಕೆ. ಶನಿವಾರ(ಜ.20) ರಾತ್ರಿ ಹೊರಮಾವಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಇಂದು(ಜ.21) ನಿಧನ ಹೊಂದಿದರು.
28 ವರ್ಷದ ಮೋನಿಷ್ ಬೆಂಗಳೂರು ಈಗಲ್ಸ್ ತಂಡದ ಸೆಂಟರ್ ಮಿಡ್ಫೀಲ್ಡರ್ ಆಗಿದ್ದರು. ಅವರು ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಮೋನಿಷ್ ಈ ಮುನ್ನ ಪರಿಕ್ರಮ ಎಫ್ಸಿ, ಡೆಕ್ಕನ್ ಎಫ್ಸಿ, ಎಡಿಇ, ಯಂಗ್ ಚಾಲೆಂಜರ್ಸ್ ಎಫ್ಸಿ ಮತ್ತು ಸಿಐಎಲ್ ತಂಡಗಳ ಪರವಾಗಿಯೂ ಆಡಿದ್ದರು. ಪ್ರಸಕ್ತ ಬಿಡಿಎಫ್ಎ ಎ ಡಿವಿಷನ್ ಲೀಗ್ ಚಾಂಪಿಯನ್ಷಿಪ್ನಲ್ಲಿ ಆಡುತ್ತಿದ್ದರು. ಮೋನಿಷ್ ನಿಧನದ ಹಿನ್ನೆಲೆಯಲ್ಲಿ ಬಿಡಿಎಫ್ಎ, ಜನವರಿ 23ರಂದು ನಿಗದಿಯಾಗಿದ್ದ ಬ್ಲಿಟ್ಜ್ ಎಫ್ಸಿ ಮತ್ತು ಬೆಂಗಳೂರು ಈಗಲ್ಸ್ ನಡುವಿನ ಪಂದ್ಯವನ್ನು ಮುಂದೂಡಿದೆ.
ಈವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. “ರಾಜ್ಯದ ಖ್ಯಾತ ಫುಟ್ಬಾಲ್ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ.
ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಜ್ಯದ ಖ್ಯಾತ ಫುಟ್ಬಾಲ್ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ.
ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ… pic.twitter.com/TgL33npzEH— CM of Karnataka (@CMofKarnataka) January 21, 2024